ADVERTISEMENT

ಹೊಸಪೇಟೆ: ಪುಣ್ಯಮೂರ್ತಿ ಶಾಲೆಗೆ ಹೊಸ ಮೆರುಗು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 6:00 IST
Last Updated 1 ಫೆಬ್ರುವರಿ 2023, 6:00 IST
ಹೊಸಪೇಟೆಯ ಪುಣ್ಯಮೂರ್ತಿ ಸರ್ಕಾರಿ ಶಾಲೆ ಗೋಡೆ ಮೇಲೆ ಚಿತ್ರ ಬಿಡಿಸುತ್ತಿರುವುದು
ಹೊಸಪೇಟೆಯ ಪುಣ್ಯಮೂರ್ತಿ ಸರ್ಕಾರಿ ಶಾಲೆ ಗೋಡೆ ಮೇಲೆ ಚಿತ್ರ ಬಿಡಿಸುತ್ತಿರುವುದು   

ಹೊಸಪೇಟೆ (ವಿಜಯನಗರ): ನಗರದ ಪುಣ್ಯಮೂರ್ತಿ ಸರ್ಕಾರಿ ಶಾಲೆ ಕಟ್ಟಡದ ಗೋಡೆಗಳು ಈಗ ಬಣ್ಣಬಣ್ಣದ ಕಲಾಕೃತಿಗಳಿಂದ ಮಿನುಗುತ್ತಿವೆ.

ಯುವ ಬ್ರಿಗೇಡ್‌ ತಂಡದವರು ದಾನಿಗಳಾದ ಪುಣ್ಯಮೂರ್ತಿ ಯಮುನಪ್ಪ ಶೆಟ್ಟಿ ಅವರ ನೆರವಿನೊಂದಿಗೆ ಶಾಲೆಯ ಒಳಗೋಡೆಗಳು, ಕಾಂಪೌಂಡ್‌ಗೆ ಬಣ್ಣ ಬಳಿದು, ಅದರ ಮೇಲೆ ಸುಂದರವಾದ ಚಿತ್ರಗಳನ್ನು ಬಿಡಿಸಿದ್ದಾರೆ.

ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ, ತಾಲ್ಲೂಕು ಸಂಚಾಲಕ ಬಸವರಾಜ ಹೊಸಮನಿ, ಪ್ರದೀಪ್, ಚೇತನ್‌, ಪ್ರತಾಪ್‌, ಅಶೋಕ್, ಭರತ್, ಪ್ರತಾಪ್ ಗೌಡ, ಪ್ರಭು ಮತ್ತು ಪಾಂಡುರಂಗ ರಂಪೂರೆ ಶ್ರಮದಿಂದ ಇದು ಸಾಧ್ಯವಾಗಿದೆ. ಜೇಸಿಸ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಕುಶಾಲ್ ಹೊಸಮನಿ, ಸ್ನೇಹಸಿರಿ ಟ್ರಸ್ಟ್‌ನ ವಿಶ್ವನಾಥ, ಗಿರಿರಾಜ್ ಮತ್ತು ದುರ್ಗೇಶ್ ಕೂಡ ಚಿತ್ರಗಳನ್ನು ಬಿಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.