ADVERTISEMENT

ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ಖರೀದಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:19 IST
Last Updated 23 ಏಪ್ರಿಲ್ 2025, 15:19 IST

ಬಳ್ಳಾರಿ: 2024-25ನೇ ಸಾಲಿನ ಹಿಂಗಾರು ಋತುವಿನಲ್ಲಿ ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಬಳ್ಳಾರಿ ಜಿಲ್ಲಾ ಟಾಸ್‌ ಫೋರ್ಸ್‌ ಸಮಿತಿ ತೀರ್ಮಾನಿಸಿದ್ದು, 2024-25 ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯನ್ನು ‘ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ’ ನಿರ್ವಹಿಸಲಿದೆ.

ಹೈಬ್ರಿಡ್ ಜೋಳಕ್ಕೆ ₹3,371 ಮತ್ತು ಮಾಲ್ದಂಡಿ ಜೋಳಕ್ಕೆ ₹3,421 ನಿಗದಿ ಮಾಡಲಾಗಿದೆ.  ನೋಂದಣಿ ಈಗಾಗಲೇ ಪ್ರಾರಂಭಗೊಂಡಿದ್ದು, ಮೇ 31ರ ವರೆಗೆ ಖರೀದಿಸಲಾಗುತ್ತದೆ. 

ADVERTISEMENT

ಖರೀದಿ ಕೇಂದ್ರಗಳು: ಬಳ್ಳಾರಿ ತಾಲ್ಲೂಕಿನ ಎಪಿಎಂಸಿ ಆವರಣ ಮತ್ತು ರೂಪನಗುಡಿ, ಸಿರುಗುಪ್ಪ ತಾಲ್ಲೂಕಿನ ಸಿರುಗುಪ್ಪ ಪಟ್ಟಣ, ಕರೂರು, ಉಪ್ಪಾರ ಹೊಸಳ್ಳಿ, ತಾಳೂರು ಮತ್ತು ಹಚ್ಚೋಳ್ಳಿ. ಕಂಪ್ಲಿ ತಾಲ್ಲೂಕಿನ ಕಂಪ್ಲಿ ಪಟ್ಟಣ, ಎಮ್ಮಿಗನೂರು. ಕುರುಗೋಡು ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. 

ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್‌ ಮೀರದಂತೆ ಜೋಳ ಖರೀದಿಸಲಾಗುತ್ತದೆ.  

ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಬಳ್ಳಾರಿ ಅಥವಾ ಸೈಯದ್ ವಸೀಮ್ ಪಾಷ (ಮೊ.9449864453) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಸಕೀನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.