ಪ್ರಾತಿನಿಧಿಕ ಚಿತ್ರ
ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಆಟೊ ಚಾಲಕ ಹಾಗೂ ಕೆಆರ್‌ಎಸ್ ಪಕ್ಷದ ಸದಸ್ಯರ ನಡುವೆ ನಡೆದ ಗಲಾಟೆಯಲ್ಲಿ ಚಾಲಕ ಗಾಯಗೊಂಡ ಘಟನೆ ಈಚೆಗೆ ನಡೆದಿದೆ.
ಕಂಪ್ಲಿ ತಾಲ್ಲೂಕಿನ ಜೌವುಕು ಗ್ರಾಮದ ಚಲುವಾದಿ ವಿರೇಶ್ ಗಾಯಗೊಂಡವರು.
ವಿರೇಶ್ ಪಡಿತರ ಅಕ್ಕಿಯನ್ನು ಆಟೊದಲ್ಲಿ ಹಾಕಿಕೊಂಡು ಕುಡತಿನಿ ಪಟ್ಟಣದ ಕಡೆಗೆ ತೆರಳುವಾಗ ಬಸವರಾಜ್ ಎಂಬುವವರು ಇತರರ ಜೊತೆ ಸೇರಿ ಆಟೊ ನಿಲ್ಲಿಸಿ ಗಲಾಟೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲು ಎಸೆದ ಪರಿಣಾಮ ವಿರೇಶ್ ಅವರ ಕಾಲಿಗೆ ಏಟು ಬಿದ್ದಿದೆ.
ತೋರಣಗಲ್ಲು ಗ್ರಾಮದ ಆರೋಪಿಗಳಾದ ಬಸವರಾಜ, ವಿರುಪಾಕ್ಷಿ, ತಿಪ್ಪೇಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.