ಬಳ್ಳಾರಿ: ನಗರದ ಹೊರ ವಲಯದ ಬಿ. ಗೋನಾಳ್‌ಗೆ ಹೋಗುವ ರಸ್ತೆಯ ಮದರಸಾ ಹಿಂಬಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 94.05 ಕ್ವಿಂಟಲ್ ಅಕ್ಕಿಯನ್ನು ಎಪಿಎಂಸಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಅಕ್ಕಿಯ ಮೌಲ್ಯ ₹2,16,315 ಎಂದು ಅಂದಾಜಿಸಲಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ನೀಡಿದ ಆದೇಶದಂತೆ ಪ್ರಭಾರ ಆಹಾರ ನಿರೀಕ್ಷಕ ವೆಂಕಟೇಶ ನೀಡಿದ ದೂರು ಆಧರಿಸಿ ದಾಳಿ ನಡೆಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.