ADVERTISEMENT

‘ಕಷ್ಟ–ಸುಖ ಆಲಿಸಲು ಸಂಘ’

ನಿವೃತ್ತ ನೌಕರರ ಸಂಘದ ಮಹಾಜನ ಸಭೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 13:13 IST
Last Updated 18 ಆಗಸ್ಟ್ 2019, 13:13 IST
ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ವಿಶ್ವನಾಥ ಮಾತನಾಡಿದರು
ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ವಿಶ್ವನಾಥ ಮಾತನಾಡಿದರು   

ಹೊಸಪೇಟೆ: ‘ನಿವೃತ್ತ ನೌಕರರ ಕಷ್ಟ ಸುಖ, ಅವರಿಗೆ ಸಿಗಬೇಕಾದ ನ್ಯಾಯಯುತ ಸರ್ಕಾರಿ ಸವಲತ್ತುಗಳ ಕುರಿತು ಸಂಘಟಿತರಾಗಿ ಹೋರಾಡಲು ಈ ಸಂಘ ಸ್ಥಾಪಿಸಲಾಗಿದೆ’ ಎಂದು ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ವಿಶ್ವನಾಥ ತಿಳಿಸಿದರು.

ಭಾನುವಾರ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ನಡೆದ ಸಂಘದ 14ನೇ ಮಹಾಜನ ಸಭೆಯಲ್ಲಿ ಮಾತನಾಡಿದ ಅವರು, ‘1990ರಲ್ಲಿ ಸ್ಥಾಪಿಸಿದ ಈ ಸಂಘವನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಬರಲಾಗಿದೆ. ನಿವೃತ್ತ ನೌಕರರಿಗೆ ವೈದ್ಯಕೀಯ ಭತ್ಯೆ ವಿಸ್ತರಿಸುವುದು, ಪಿಂಚಣಿ ಹೆಚ್ಚಿಸುವುದರ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದು ಸಂಘದ ನಿರಂತರ ಹೋರಾಟದ ಫಲವಾಗಿ ಕೈಗೂಡುವ ಹಂತಕ್ಕೆ ಬಂದು ನಿಂತಿದೆ’ ಎಂದರು.

ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಎಂ.ವಿರೂಪಾಕ್ಷಯ್ಯ, ಖಜಾಂಚಿ ಎ. ವೈಜನಾಥ, ಸಂತೋಜಿರಾವ್, ಬಿ.ರಾಮಣ್ಣ, ದೇವದಾಸ್, ಆರ್.ಜಂಬುನಾಥ, ತಿಪ್ಪೇಸ್ವಾಮಿ, ಕೂಡ್ಲಿಗಿ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಎಂ.ವೀರಯ್ಯ ಸ್ವಾಮಿ, ಸಂಘದ ತಾಲ್ಲೂಕು ಉಪಾಧ್ಯಕ್ಷ ಶಿವದೇವಯ್ಯ ಸ್ವಾಮಿ, ಎ.ಎಂ.ಮಲ್ಲಿಕಾರ್ಜುನಯ್ಯ, ಪಿ.ತಿಪ್ಪೇಸ್ವಾಮಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಪಿ.ವಿರೂಪಾಕ್ಷಯ್ಯ, ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ವ್ಯವಸ್ಥಾಪಕ ಬಿ.ಎಚ್.ಎಂ.ಕುಮಾರಸ್ವಾಮಿ, ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲ, ಕಂಪ್ಲಿ ಗಂಗಾಧರಯ್ಯ, ಸಂಡೂರು ಕುಮಾರಸ್ವಾಮಿ, ಶರಣಯ್ಯ ಚರಂತಿಮಠ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.