ADVERTISEMENT

ಕಂಪ್ಲಿ: ಶನೈಶ್ಚರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 27 ಮೇ 2025, 14:51 IST
Last Updated 27 ಮೇ 2025, 14:51 IST
ಕಂಪ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ನಡೆದ ಶನೈಶ್ಚರ ಜಯಂತ್ಯುತ್ಸವದಲ್ಲಿ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತೀ ಶ್ರೀ ಪೂಜೆ ಸಲ್ಲಿಸಿದರು
ಕಂಪ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ನಡೆದ ಶನೈಶ್ಚರ ಜಯಂತ್ಯುತ್ಸವದಲ್ಲಿ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತೀ ಶ್ರೀ ಪೂಜೆ ಸಲ್ಲಿಸಿದರು   

ಕಂಪ್ಲಿ: ಇಲ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಶನೈಶ್ಚರ ಜಯಂತ್ಯುತ್ಸವ ಜರುಗಿತು.

ದೇವಸ್ಥಾನದಲ್ಲಿ ಶನಿದೇವರ ಪ್ರತಿಮೆಗೆ ಪಂಚಾಮೃತಾಭಿಷೇಕ, ಏಕಾದಶ ರುದ್ರಾಭಿಷೇಕ, ಅಷ್ಟೋತ್ತರ ಸಂಖ್ಯಾಸಹಿತ ತಿಲ ತೈಲಾಭಿಷೇಕ, ಮೃತ್ಯುಂಜಯ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶನಿದೇವರ ಪ್ರತಿಮೆಯನ್ನು ಫಲ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಅಶ್ವತ್ಥನಾರಾಯಣ, ಜಯಂತ್ ಶ್ರೀವತ್ಸ, ಶಶಿಧರಶಾಸ್ತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅನ್ನಸಂತರ್ಪಣೆ ನೆರವೇರಿತು.

ADVERTISEMENT

ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಭಕ್ತರಾದ ನೀತು ಜಗದೀಶ್ ರಾಯ್ಕರ್, ಮನೋಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.