ADVERTISEMENT

ಬುದ್ಧಿಮಾಂದ್ಯ ಮಕ್ಕಳಿಂದ ಹೊಸ ವರ್ಷಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 12:49 IST
Last Updated 4 ಜನವರಿ 2019, 12:49 IST
ಹೊಸಪೇಟೆಯ ಆಕಾಂಕ್ಷ ಬುದ್ಧಿಮಾಂದ್ಯ ವಸತಿರಹಿತ ವಿಶೇಷ ಶಾಲೆಯಲ್ಲಿ ಶುಕ್ರವಾರ ಹೊಸ ವರ್ಷ ಆಚರಿಸಲಾಯಿತು
ಹೊಸಪೇಟೆಯ ಆಕಾಂಕ್ಷ ಬುದ್ಧಿಮಾಂದ್ಯ ವಸತಿರಹಿತ ವಿಶೇಷ ಶಾಲೆಯಲ್ಲಿ ಶುಕ್ರವಾರ ಹೊಸ ವರ್ಷ ಆಚರಿಸಲಾಯಿತು   

ಹೊಸಪೇಟೆ: ಇಲ್ಲಿನ ಆಕಾಂಕ್ಷ ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ವಿಶೇಷ ಶಾಲೆಯಲ್ಲಿ ಶುಕ್ರವಾರ ಹೊಸ ವರ್ಷ ಆಚರಿಸಲಾಯಿತು.

ಮಕ್ಕಳು ಕೇಕ್‌ ಕತ್ತರಿಸಿ, ಪರಸ್ಪರ ವಿನಿಮಯ ಮಾಡಿಕೊಂಡರು. ಒಬ್ಬರಿಗೊಬ್ಬರು ಹೊಸ ವರ್ಷದ ಶುಭ ಕೋರಿದರು.

ವಾತ್ಸಲ್ಯ ಟ್ರಸ್ಟ್‌ ಕಾರ್ಯನಿರ್ವಾಹಕ ಕಾರ್ಯದರ್ಶಿ ಯಶಸ್ವಿನಿ ಮಾತನಾಡಿ, ‘ಟ್ರಸ್ಟ್‌ 2008ರಿಂದ ಸತತವಾಗಿ ವಿಶೇಷ ಮಕ್ಕಳ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಈ ಮಕ್ಕಳ ಬೆಳವಣಿಗೆಗೆ ಪಾಲಕರು, ಸಮಾಜ ವಿಶೇಷ ಕಾಳಜಿ ವಹಿಸಬೇಕು’ ಎಂದರು.

ADVERTISEMENT

ಟ್ರಸ್ಟ್‌ ಉಪಾಧ್ಯಕ್ಷ ಕೆ.ಎಸ್‌. ಗುಪ್ತಾ, ಶಾಲೆಯ ಮುಖ್ಯಶಿಕ್ಷಕ ಬಸಯ್ಯ ಎಸ್‌. ಸಾಲಿಮಠ, ಲೆಕ್ಕಾಧಿಕಾರಿ ವಿ.ಎಸ್‌. ಅನೂಪ್‌ ಕುಮಾರ್‌, ಶಿಕ್ಷಕರಾದ ಶ್ರೀಕಾಂತ ಅಮಟೆ, ಎನ್‌. ದುರುಗಮ್ಮ, ನಾಗಪ್ರಭ, ಸಿಬ್ಬಂದಿ ಹುಳ್ಳಿ ಪ್ರಕಾಶ್‌, ಸಂಧ್ಯಾ, ಹುಲಿಗೆಮ್ಮ, ಗಾಳೆಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.