ADVERTISEMENT

ಸಂಘಟನೆಗಳು ಸಮಾಜಮುಖಿ ಕಾರ್ಯ ಮಾಡಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ವಿಜಯಪುರ: ಸಂಘಟನೆಗಳು ಸಮಾಜ ಮುಖಿ ಕೆಲಸ ಮಾಡಿದಾಗ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಎಸ್. ನಾಗರಾಜ್ ಹೇಳಿದರು.

ಸಮೀಪದ  ಕೋರಮಂಗಲ ಗ್ರಾಮದಲ್ಲಿ  ಭಾನುವಾರ ನಡೆದ ಛಲವಾದಿ ಮಹಾಸಭಾ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಎಲ್ಲಾ ಹಿಂದುಳಿದ, ಶೋಷಿತ ವರ್ಗದವರ ಪರ ಹೋರಾಡಿ, ಸಮಾನತೆಗಾಗಿ ಸಂವಿಧಾನ ರಚಿಸಿದರು. ಸ್ವಾಭಿಮಾನದಿಂದ ಬದುಕಬೇಕೆಂಬುದನ್ನು ಕಲಿಸಿಕೊಟ್ಟರು ಎಂದರು.

ಖಾಖೆ ಉದ್ಘಾಟಿಸಿದ ದೇವನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಕಾಳಪ್ಪ ಅವರು ಮಾತನಾಡಿ, 3 ವರ್ಷಗಳ ಹಿಂದೆ  ಶಿವಮೊಗ್ಗದಲ್ಲಿ ಐಎಎಸ್ ಅಧಿಕಾರಿ ಶಿವರಾಂ ಅವರ ನೇತೃತ್ವದಲ್ಲಿ ಪ್ರಾರಂಭವಾದ ಛಲವಾದಿ ಮಹಾಸಭಾ ಗಟ್ಟಿಯಾದ ಅಸ್ತಿತ್ವ ಹೊಂದಿದೆ.
 
ಸಮಾಜಕ್ಕೆ ಸರ್ಕಾರ ವು ಬೆಂಗಳೂರಿನಲ್ಲಿ   ಭವನವನ್ನು ನೀಡಿದ್ದು, ಅನುದಾನವನ್ನೂ ನೀಡಿದೆ. ಆದ್ದರಿಂದ ನಮ್ಮ ಸಮುದಾಯವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಒಗ್ಗಟ್ಟು ಮತ್ತು ಶ್ರಮವಿದ್ದರೆ ಜನಾಂಗದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ  ಎ.ಡಿ. ಆವಲಪ್ಪ ಮಾತನಾಡಿದರು.

 ಗಾಯಕ ಅಶ್ವತ್ಥ್  ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು. ವಿಜಯಪುರ ಹೋಬಳಿಯ ಛಲವಾದಿ ಮಹಾಸಭಾ ಅಧ್ಯಕ್ಷ ಚಿಕ್ಕಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು.  ಬೆಂ.ಗ್ರಾ.ಜಿಲ್ಲೆಯ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಾ ಪ್ರಶಾಂತ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಕಾರಹಳ್ಳಿ ಶ್ರಿನಿವಾಸ್, ತಾಲ್ಲೂಕು ಕಾರ್ಯಾಧ್ಯಕ್ಷ ಮುನಿಯಪ್ಪ,  ಜಿ.ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ರಾಜಣ್ಣ, ಸದಸ್ಯ ವಿ.ನಾರಾಯಣಸ್ವಾಮಿ, ಕೋರಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ನರಸಿಂಹಮೂರ್ತಿ, ವಾಲ್ಮೀಕಿ ಸಂಘದ ಅಧ್ಯಕ್ಷ ಮುನಿಯಪ್ಪ, ಮಹಾಸಭಾ ನಗರ ಮತ್ತು ಹೋಬಳಿ ಘಟಕಗಳ ಪದಾಧಿಕಾರಿಗಳು,  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.