ADVERTISEMENT

‘ರಕ್ತದಾನಕ್ಕೆ ಉತ್ತೇಜನ ನೀಡಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 9:00 IST
Last Updated 17 ಡಿಸೆಂಬರ್ 2013, 9:00 IST

ವಿಜಯಪುರ: ಯುವಕರು ರಕ್ತದಾನ ಮಾಡುವ ಮತ್ತು ಈ ಬಗ್ಗೆ ಇತರರಿಗೆ ಉತ್ತೇಜನ ನೀಡುವ ಮೂಲಕ ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗಿ ಎಂದು ಚಿತ್ರನಟ ಶ್ರೀನಗರ ಕಿಟ್ಟಿ ತಿಳಿಸಿದರು.

ಪಟ್ಟಣ ಸಮೀಪದ ಬೂದಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಲಯನ್ಸ್ ಕ್ಲಬ್ ಆಫ್ ಬೂದಿಗೆರೆ, ಡಾ. ರಾಜ್ ಕುಮಾರ್ (ಅಪ್ಪಾಜಿ) ರಕ್ತ ನಿಧಿ, ಬೆಂಗಳೂರು ರಕ್ತ ನಿಧಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾ ಡಿದರು. 

ರಕ್ತದಾನ ಮಾಡುವುದರಿಂದ ದೇಹ ದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆಯಾಗುತ್ತದೆ. ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತತ್ಪ ರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ರಕ್ತದಲ್ಲಿ ಕೊಬ್ಬಿನಂಶ ಕಡಿಮೆ ಮಾ ಡಲು ಸಹಾಯವಾಗಲಿದ್ದು, ಹೃದಯ ಘಾತವನ್ನು ತಡೆಯಲು ರಕ್ತದಾನ ಅನುಕೂಲವಾಗುತ್ತದೆ ಎಂದರು.

ಹಾಸ್ಯ ನಟ ಟೆನ್ನಿಸ್ ಕೃಷ್ಣ ಮಾತ ನಾಡಿ, ಸಂಘ ಸಂಸ್ಥೆಗಳು ಗ್ರಾಮೀಣ ಜನರಿಗೂ ಮಹತ್ವವನ್ನು ತಿಳಿಸಿ ರಕ್ತ ದಾನ ಬಗ್ಗೆ ಇರುವ ತಪ್ಪು ತಿಳುವಳಿಕೆ ಯನ್ನು ಹೋಗಲಾಡಿಸಿ ಎಂದರು.

ಚಿತ್ರ ನಿರ್ಮಾಪಕ  ಸಂತೋಷ್ ಪೈ ಮಾತನಾಡಿ, ಎಲ್ಲರೂ ತಾವು ದುಡಿದ ಹಣದಲ್ಲಿ ಸ್ವಲ್ಪ ಪ್ರಮಾಣದ ಹಣ ವನ್ನು ಸಮಾಜ ಸೇವೆಯ ಮೂಲಕ ಬಡಜನರಿಗೆ ಅನುಕೂಲ ಮಾಡಬೇಕು ಎಂದರು. ಬೂದಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀನಾಥ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಯನ್ಸ್‌ ಸಂಸ್ಥೆಯ  ಜಿಲ್ಲಾ ರಾಜ್ಯಪಾಲ ಆರ್. ಕುಮಾರ್, ಕಾರ್ಯದರ್ಶಿ ಬಿ.ರಿಯಾಜ್, ಖಜಾಂಚಿ ಎನ್. ನಾರಾಯಣಸ್ವಾಮಿ, ಮಾಜಿ ಲಯನ್ಸ್ ಅಧ್ಯಕ್ಷ ಎಂ. ರಮೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸಿ.ಪಿ ಕುಸುಮಾ, ಎಸ್. ಮಹೇಶ್, ಸದಸ್ಯ ಎನ್. ಮಂಜು ನಾಥ್, ಅಫ್ಸರ್, ಡಾ. ಚನ್ನಕೇಶವ ರೆಡ್ಡಿ, ವೆಂಕಟೇಶ್ ಮೂರ್ತಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.