ADVERTISEMENT

ವಿಜಯಪುರ: ₹5 ಸಾವಿರ ದಂಡ ಹೋಟೆಲ್‌‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:43 IST
Last Updated 23 ಏಪ್ರಿಲ್ 2021, 4:43 IST
ವಿಜಯಪುರದ ಶಿಡ್ಲಘಟ್ಟ ಕ್ರಾಸ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಹೊಟೇಲ್‌ಗೆ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಅವರು ಹಾಕಿದರು
ವಿಜಯಪುರದ ಶಿಡ್ಲಘಟ್ಟ ಕ್ರಾಸ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಹೊಟೇಲ್‌ಗೆ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಅವರು ಹಾಕಿದರು   

ವಿಜಯಪುರ: ಕೊರೊನಾ 2ನೇ ಅಲೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ, ಹೋಟೆಲ್‌‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಹೋಟೆಲ್‌‌ ಬೀಗ ಹಾಕಿಸಿದ್ದಾರೆ.

ಜಿಲ್ಲಾಧಿಕಾರಿ ಸೂಚನೆಯಂತೆ ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಅವರು, ಹೋಟೆಲ್‌‌ಗೆ ಬೀಗ ಹಾಕಿ ₹5,000 ದಂಡ ವಿಧಿಸಿದ್ದಾರೆ.

ಪಟ್ಟಣದ ಶಿಡ್ಲಘಟ್ಟ ಕ್ರಾಸ್‌ನಲ್ಲಿರುವ ಹೋಟೆಲ್‌‌ಗಳಲ್ಲಿ ಪಾರ್ಸಲ್‌ಗೆ ಮಾತ್ರವೇ ಅವಕಾಶವಿದೆ. ಗ್ರಾಹಕರನ್ನು ಕೂರಿಸಿಕೊಂಡು ವಹಿವಾಟು ನಡೆಸುವಂತಿಲ್ಲ ಎಂದು ನಿರ್ದೇಶನವಿದ್ದರೂ ಎಂದಿನಂತೆ ಗ್ರಾಹಕರನ್ನು ಕೂರಿಸಿಕೊಂಡು ವ್ಯಾಪಾರದಲ್ಲಿ ತೊಡಗಿಸಿದ್ದರು. ಈ ವೇಳೆ ಸ್ವತಃ ಜಿಲ್ಲಾಧಿಕಾರಿ ಅವರೇ ಎಚ್ಚರಿಕೆ ನೀಡಿದರೂ ಅದನ್ನು ವಿರೋಧಿಸಿದ್ದರಿಂದ ಹೋಟೆಲ್‌‌ಗೆ ಬೀಗ ಹಾಕಿಸಲು ಸೂಚಿಸಿದ್ದರು. ಪಟ್ಟಣದ ಹಲವು ಕಡೆ ಸಂಚರಿಸಿ ಎಚ್ಚರಿಕೆ ನೀಡಿದರು. ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ರಾವ್, ಪರಿಸರ ಎಂಜಿನಿಯರ್ ಮಹೇಶ್ ಕುಮಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.