ADVERTISEMENT

ಆನೇಕಲ್ | 'ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ'

ಎಚ್‌ಎಸ್‌ವಿ, ಸಿದ್ದಲಿಂಗಯ್ಯಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:32 IST
Last Updated 22 ಜೂನ್ 2025, 14:32 IST
ಆನೇಕಲ್ ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಆಯೋಜಿಸಿದ್ದ ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮದಲ್ಲಿ ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿದರು
ಆನೇಕಲ್ ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಆಯೋಜಿಸಿದ್ದ ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮದಲ್ಲಿ ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿದರು   

ಆನೇಕಲ್: ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಆಶ್ರಮದಲ್ಲಿ ಶನಿವಾರ ನಡೆದ ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮದಲ್ಲಿ ಕವಿ ಎಚ್‌.ಎಸ್.ವೆಂಕಟೇಶ್‌ ಮೂರ್ತಿ ಮತ್ತು ಸಾಹಿತಿ ಡಾ.ಜಿ.ಎಸ್‌.ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಲ್ಲೂಕು ಸರ್ಕಾರಿ ನೌಕರರ ಸಂಘ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ರಮಣ ಮಹರ್ಷಿ ಆಶ್ರಮ, ಜ್ಯೋತಿ ಗಾಯನ ಸಭಾ, ಮಾತೃ ವಾತ್ಸಲ್ಯ ಫೌಂಡೇಷನ್‌ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್‌ಎಸ್‌ವಿ ಅವರ ಆನೇಕಲ್‌ನೊಂದಿಗೆ ಒಡನಾಟವನ್ನು ಸ್ಮರಿಸಲಾಯಿತು. ಕಲಾವಿದರು ಅವರ ಗೀತಾ ಗಾಯನ ನಡೆಸಿಕೊಟ್ಟರು.

ಗಾಯಕ ರಾಘವೇಂದ್ರ ಬಿಜಾಡಿ ಅವರು ಪ್ರಸ್ತುತ ಪಡಿಸಿದ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ...’ ಗೀತೆ ಗಾಯನ ಎಲ್ಲರ ಗಮನ ಸೆಳೆಯಿತು. ಶಿಕ್ಷಕರು ಗೀತೆಗಳನ್ನು ವಾಚನ ಮಾಡಿದರು.

ADVERTISEMENT

‘ಎಚ್‌ಎಸ್‌ವಿ ಅವರು ಆನೇಕಲ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆನೇಕಲ್‌ ಅವರಿಗೆ ಎರಡನೇ ತವರುಮನೆಯಾಗಿತ್ತು. ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ ಮತ್ತು ತಾವು ಏಕವಚನದ ಗೆಳೆಯರಾಗಿದ್ದೇವು. ರಾಮ ಲಕ್ಷ್ಮಣರಂತಿದ್ದೆವು ಎಚ್‌ಎಸ್‌ವಿ ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಎಚ್‌ಎಸ್ವಿ ಅವರು ಕುಟುಂಬವನ್ನು ಪ್ರೀತಿಸುವುದರ ಜೊತೆಗೆ ವಿಶ್ವ ಕುಟುಂಬಕ್ಕೆ ಬೆಲೆ ನೀಡುತ್ತಿದ್ದರು ಎಂದು ಕವಿ ಬಿ.ಆರ್‌.ಲಕ್ಷ್ಮಣರಾವ್‌ ಸ್ಮರಿಸಿದರು.

ಮರಣವನ್ನು ಸ್ಮರಣೆಯಿಂದ ಗೆಲ್ಲಬೇಕು ಎಂಬ ಮಾತಿದೆ. ಅದರಂತೆ ಎಚ್‌ಎಸ್‌ವಿ ಅವರಂತಹ ಕವಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಹಿತ್ಯ, ಕವಿತೆ, ಕವನಗಳು ನಮ್ಮೊಂದಿಗಿದೆ. ನಮ್ಮ ಮುಂದಿನ ಪೀಳಿಗೆಗೆ ಈ ಕಾವ್ಯ ಸಾಹಿತ್ಯವನ್ನು ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಲೇಖಕ ಡಾ.ಎಚ್‌.ಎಸ್.ಸತ್ಯನಾರಾಯಣ್‌ ಹೇಳಿದರು.

ಸಾಹಿತ್ಯ ಶೂದ್ರ ಶ್ರೀನಿವಾಸ್, ಎಚ್‌ಎಸ್‌ವಿ ಅವರ ಕುಟುಂಬಸ್ಥರಾದ ಸುಧೀರ್, ಶಾಲಿನಿ, ಶ್ರೀರಮಣ ಮಹರ್ಷಿ ಆಶ್ರಮದ ಮುಖ್ಯಸ್ಥ ಬಿ.ಶ್ರೀನಿವಾಸರೆಡ್ಡಿ, ಕೆಎಸ್‌ನ ಟ್ರಸ್ಟ್‌ನ ಅಧ್ಯಕ್ಷ ಕಿಕ್ಕೀರಿ ಕೃಷ್ಣಮೂರ್ತಿ, ತಿಲಕ್‌ ನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌, ಭುದಾಖಲೆ ಇಲಾಖೆಯ ಎಡಿಎಲ್‌ಆರ್‌ ಮದನ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ವೆಂಕಟೇಶ್‌, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ಅನುದಾನ ರಹಿತ ಶಾಲೆಗಳ ಒಕ್ಕೂಟದ ರವಿಕುಮಾರ್, ಡಿ.ಮುನಿರಾಜು, ಚಿನ್ಮಯ ಸೇವಾ ಸಂಸ್ಥೆಯ ಚಿನ್ನಪ್ಪ.ವೈ.ಚಿಕ್ಕಹಾಗಡೆ, ನಾಗವೇಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಮಂಜುನಾಥ್‌, ಗೌರವ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಸರ್ವೆ ಚಂದ್ರಶೇಖರ್, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಮಹೇಶ್‌ ಊಗಿನಹಳ್ಳಿ, ಮಾತೃ ವಾತ್ಸಲ್ಯ ಸಂಸ್ಥೆಯ ಅನ್ನಪೂರ್ಣ, ಕಂಠೀರವ ನೃತ್ಯ ಸಂಗೀತ ಸಭಾದ ಅಧ್ಯಕ್ಷ ಪಿ.ಧನಂಜಯ, ಜ್ಯೋತಿ ಗಾಯನ ಸಭಾದ ಭಾಗಪ್ಪ ಗೊರನಾಳ, ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸರೋಜಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.