ADVERTISEMENT

 ದೇವನಹಳ್ಳಿ | ಬಕ್ರೀದ್‍: ಕುರಿ, ಮೇಕೆಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:40 IST
Last Updated 5 ಜೂನ್ 2025, 14:40 IST
ಬಕ್ರೀದ್ ಹಬ್ಬಕ್ಕೆ ರೈತ ನಾಗರಾಜ್ ಸಾಕಿರುವ ಕುರಿಗಳು
ಬಕ್ರೀದ್ ಹಬ್ಬಕ್ಕೆ ರೈತ ನಾಗರಾಜ್ ಸಾಕಿರುವ ಕುರಿಗಳು   

ವಿಜಯಪುರ (ದೇವನಹಳ್ಳಿ): ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದು, ಕುರಿ, ಮೇಕೆ, ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ.

ಬಕ್ರೀದ್ ಹಿನ್ನೆಲೆ ಸಂತೆಗಳಲ್ಲಿ ಕುರಿ, ಮೇಕೆ, ನಾಟಿ ಕೋಳಿಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಜೊತೆಗೆ ಈಗಾಗಲೇ ಮುಸ್ಲಿಂ ಬಾಂಧವರು ರೈತರಿಂದಲೂ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದಾರೆ.

ಈ ಹಬ್ಬದಲ್ಲಿ ಮುಸಲ್ಮಾನರು ತಮ್ಮ ಶಕ್ತಾನುಸಾರ ದಾನ ಮಾಡುತ್ತಾರೆ. ಜೊತೆಗೆ ವಿಶೇಷ ಮಾಂಸಹಾರದ ಖಾದ್ಯಗಳನ್ನು ತಯಾರಿಸಿ ಅದನ್ನು ಸಂಬಂಧಿಕರಿಗೆ ಉಣಬಡಿಸುತ್ತಾರೆ.  

ADVERTISEMENT

ಕಳೆದ ಆರು ವರ್ಷಗಳಿಂದ ನಾನು ಕುರಿ ಸಾಕಾಣಿಕೆ ಮಾಡುತ್ತಿದ್ದು, ಪ್ರತಿ ವರ್ಷ ಬಕ್ರೀದ್‍ಗೆ ಕುರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವರ್ಷ 25 ಕುರಿಗಳನ್ನು ಬೆಂಗಳೂರಿನ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದೇನೆ. 25 ರಿಂದ 30 ಕೆ.ಜಿ ಬರುವ ಕುರಿಯನ್ನು ₹25 ರಿಂದ ₹30 ಸಾವಿರಕ್ಕೆ ಮಾರಾಟ ಮಾಡಿದ್ದು, ಉತ್ತಮ ಲಾಭ ಸಿಕ್ಕಿದೆ ಎಂಬುದು ಪಟ್ಟಣದ ಮಹಬೂಬ ನಗರದ ರೈತ ನಾಗರಾಜ್ ಅವರ ಮಾತಾಗಿದೆ.

ಪ್ರತಿ ವರ್ಷ ಹಬ್ಬಕ್ಕೆ ವಾರದ ಮುಂಚಿತವಾಗಿ ಹಳ್ಳಿಗಳಲ್ಲಿ ತಿರುಗಾಡಿ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದೆವು. ಈ ಬಾರಿ ಕುರಿ, ಮೇಕೆ ಬೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತ ₹4 ರಿಂದ ₹5 ಸಾವಿರ ಹೆಚ್ಚಿನ ಬೆಲೆಗೆ ರೈತರು ಮಾರಾಟ ಮಾಡುತ್ತಿದ್ದಾರೆ ಎಂಬುದು ಕುರಿ ಮಾಂಸದ ವ್ಯಾಪಾರಿಯೊಬ್ಬರ ಮಾತಾಗಿದೆ.

ನಾಟಿ ಕೋಳಿ ಕೆ.ಜಿ ₹500: ಫಾರಂ ಕೋಳಿ ಯಾವಾಗಲೂ ಸಿಗುತ್ತದೆ. ಸದ್ಯ ಈಗ ನಾಟಿ ಕೋಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೆ.ಜಿ.₹500 ರಿಂದ ₹550ಕ್ಕೆ ಮಾರಾಟವಾಗುತ್ತಿದೆ ಎಂಬುದು ಮಾಂಸದ ವ್ಯಾಪಾರೊಯೊಬ್ಬರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.