ADVERTISEMENT

ಹೊಸಕೋಟೆ | ಮನ ಸೆಳೆದ ‘ಅಶ್ವಪರ್ವ’ ನಾಟಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 15:43 IST
Last Updated 15 ಏಪ್ರಿಲ್ 2025, 15:43 IST
‘ಜನಪದರು’ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಅಶ್ವಪರ್ವ’ ನಾಟಕ ದೃಶ್ಯ
‘ಜನಪದರು’ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಅಶ್ವಪರ್ವ’ ನಾಟಕ ದೃಶ್ಯ   

ಹೊಸಕೋಟೆ: ನಿಂಬೇಕಾಯಿಪುರ ‘ಜನಪದರು’ ರಂಗ ವೇದಿಕೆಯಲ್ಲಿ ಎಸ್.ರಾಮನಾಥ್ ರಚಿಸಿ, ಪುನೀತ್ ರಂಗಾಯಣ ನಿರ್ದೇಶಿಸಿರುವ ‘ಅಶ್ವಪರ್ವ’ ನಾಟಕ ಬೆಂಗಳೂರಿನ ದಕ್ಷ ತರಂಗ ನಾಟಕ ತಂಡದಿಂದ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಎಸ್.ಎಲ್.ಭೈರಪ್ಪ ಅವರ ಪರ್ವ ಮತ್ತು ವಿ.ಸೀತಾರಾಮಯ್ಯ ಅವರ ಆಗ್ರಹ ಕೃತಿಗಳ ಪ್ರಭಾವದಿಂದ ರಚಿತವಾದ ಈ ನಾಟಕವನ್ನು ದಕ್ಷ ತರಂಗದ ಯುವ ಕಲಾವಿದರು ಅತ್ಯಂತ ಮನೋಜ್ಞವಾಗಿ ಅಭಿನಯಿಸಿ ಪ್ರಸ್ತುತಪಡಿಸಿದರು.
ಜನಪದರ ವೇದಿಕೆ ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ, ನಾಟಕದ ನಿರ್ದೇಶಕರು, ತಂತ್ರಜ್ಞರು, ಕಲಾವಿದರನ್ನು ಸನ್ಮಾನಿಸಿದರು. ಎಂ ಸುರೇಶ್, ವೆಂಕಟಾಚಲಪತಿ, ಮಮತಾ, ಮುನಿರಾಜು ಬಿದರೇನ ಅಗ್ರಹಾರ, ಬಸವರಾಜು, ಶಿಮಕುಮಾರ್ ತಾವರೆಕೆರೆ, ಶಿಮಕುಮಾರ್ ಕಾಟಂನಲ್ಲೂರು, ರಾಜಣ್ಣ, ಕೆ.ಸುರೇಶ ಇದ್ದರು.

‘ಜನಪದರು’ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಅಶ್ವಪರ್ವ’ ನಾಟಕ ದೃಶ್ಯ
‘ಜನಪದರು’ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಅಶ್ವಪರ್ವ’ ನಾಟಕ ದೃಶ್ಯ
‘ಜನಪದರು’ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಅಶ್ವಪರ್ವ’ ನಾಟಕ ದೃಶ್ಯ
‘ಜನಪದರು’ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಅಶ್ವಪರ್ವ’ ನಾಟಕ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT