ADVERTISEMENT

ಕಾಂಗ್ರೆಸ್ ಎಸ್‍ಸಿ ಘಟಕದ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:32 IST
Last Updated 10 ಜೂನ್ 2025, 14:32 IST
ವಿಜಯಪುರ ಟೌನ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಎಸ್‍ಸಿ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಲಾಯಿತು
ವಿಜಯಪುರ ಟೌನ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಎಸ್‍ಸಿ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಲಾಯಿತು   

ವಿಜಯಪುರ (ದೇವನಹಳ್ಳಿ): ವಿಜಯಪುರ ಟೌನ್ ಕಾಂಗ್ರೆಸ್ ಪರಿಶಿಷ್ಟ ಜಾತಿ (ಎಸ್‍ಸಿ) ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿಜಯಪುರ ಟೌನ್ ಕಾಂಗ್ರೆಸ್ ಎಸ್‍ಸಿ ಘಟಕದ ಕಾರ್ಯಾಧ್ಯಕ್ಷರಾಗಿ ನಾಗೇಶ್, ಶ್ರೀನಿವಾಸ್, ಸುರೇಶ್, ರವಿಕುಮಾರ್, ನಾಗರಾಜ್, ಪವನ್, ತರುಣ್, ಅರವಿಂದ್ ಗಂಗರಾಜು, ನರಸಿಂಹಮೂರ್ತಿ, ಕಿಟ್ಟಪ್ಪ. ಉಪಾಧ್ಯಕ್ಷರಾಗಿ ನವೀನ್, ಮುನಿಕುಮಾರ್, ಸಂತೋಷ್, ಶಿವ, ಶ್ರೀನಿವಾಸ್, ದಿಲೀಪ್, ಮುನಿಯಪ್ಪ ಅವರು ನೇಮಕಗೊಂಡಿದ್ದಾರೆ.

ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ನೂತನ ಪದಾಧಿಕಾರಿಗಳು ಪಕ್ಷದ ಏಳಿಗೆಗಾಗಿ ದುಡಿಯಬೇಕು. ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ADVERTISEMENT

ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಲಾಯಿತು.

ವಿಜಯಪುರ ಕಾಂಗ್ರೆಸ್ ಎಸ್‍ಸಿ ಘಟಕದ ಬ್ಲಾಕ್ ಅಧ್ಯಕ್ಷ ಮುದುಗುರ್ಕಿ ನಾರಾಯಣಸ್ವಾಮಿ, ವಿ.ಎಂ.ನಾಗರಾಜು, ಎ.ಆರ್.ಅನೀಫ್ ಉಲ್ಲಾ ಮುಬಾರಕ್, ರಾಜಣ್ಣ, ಇಕ್ಬಾಲ್, ವೇಣುಗೋಪಾಲ್, ಎಸ್.ಮಂಜುನಾಥ್, ಅಬ್ಜಲ್, ಜಗದೀಶ್, ಹರೀಶ್, ಗಿರೀಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.