ADVERTISEMENT

ವಿದ್ಯುತ್‌ ಅವಘಡ: ಮಳೆಗಾಲದಲ್ಲಿ ಹೆಚ್ಚು ಜಾಗೃತ ವಹಿಸಿ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:27 IST
Last Updated 16 ಮೇ 2025, 16:27 IST
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ವಿಶೇಷ ವಾರ್ಷಿಕ ಎನ್‌.ಎಸ್‌.ಎಸ್‌ ಶಿಬಿರದಲ್ಲಿ ವಿದ್ಯುತ್‌ ಸುರಕ್ಷತೆ ಕುರಿತು ಬೆಸ್ಕಾಂ ಎಂಜಿನಿಯರ್ ಹೇಮಂತ್‌ಲಿಂಗಪ್ಪ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ವಿಶೇಷ ವಾರ್ಷಿಕ ಎನ್‌.ಎಸ್‌.ಎಸ್‌ ಶಿಬಿರದಲ್ಲಿ ವಿದ್ಯುತ್‌ ಸುರಕ್ಷತೆ ಕುರಿತು ಬೆಸ್ಕಾಂ ಎಂಜಿನಿಯರ್ ಹೇಮಂತ್‌ಲಿಂಗಪ್ಪ ಮಾತನಾಡಿದರು   

ತೂಬಗೆರೆ(ದೊಡ್ಡಬಳ್ಳಾಪುರ): ಆಧುನಿಕ ಜನರ ಬದುಕು ವಿದ್ಯುತ್‌ ಮೇಲೆ ಸಂಪೂರ್ಣ ಅವಲಂಭಿತವಾಗಿದೆ. ದೈನಂದಿನ ಕೆಲಸಗಳಲ್ಲಿ ವಿದ್ಯುತ್ ಉಪಕರಣಗಳ ಬಳಕೆ ಹಾಗೂ ಸುರಕ್ಷಿತ ಕ್ರಮಗಳ ಪ್ರಾಥಮಿಕ ಮಾಹಿತಿಯನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದು ಬೆಸ್ಕಾಂ ಎಂಜಿನಿಯರ್ ಹೇಮಂತ್‌ಲಿಂಗಪ್ಪ ಹೇಳಿದರು.

ತಾಲ್ಲೂಕಿನ ತೂಬಗೆರೆಯಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ  ನಡೆಯುತ್ತಿರುವ ವಿಶೇಷ ವಾರ್ಷಿಕ ಎನ್‌ಎಸ್‌ಎಸ್‌ ಶಿಬಿರದಲ್ಲಿ ವಿದ್ಯುತ್‌ ಸುರಕ್ಷತೆ ಕುರಿತು ಮಾತನಾಡಿದರು.

ವಿದ್ಯುತ್‌ ಅಪಘಾತಗಳು ಹೆಚ್ಚಾಗಿ ನಡೆಯುವುದೇ ಮಳೆಗಾಲದಲ್ಲಿ ಸಂದರ್ಭದಲ್ಲಿ ಸಾರ್ವಜನಿಕರು ಮಳೆ, ಗಾಳಿ ಬಂದ ಸಮಯದಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕು. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್‌ ಅವಘಡ ಅಥವಾ ತೊಂದರೆ ಇದ್ದಾಗ ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಬಹುದಾಗಿದೆ.

ADVERTISEMENT

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಅಪ್ಪು ಅಭಿಮಾನಿ ಬಳಗದ ಗಂಗಾಧರ್, ರಾಮಾಂಜನೇಯ, ಶಿಬಿರದ ಸಂಯೋಜಕ ಡಾ.ಪ್ರಕಾಶ್‌ಮಂಟೇದ, ಪ್ರೊ.ನೀರಜಾದೇವಿ ಇದ್ದರು. ದೇವನಹಳ್ಳಿಯ ಸಿ.ಅಶ್ವಥ್ ಕಲಾ ತಂಡದ ಸುನಿಲ್,ಮಹೇಶ್,ನಟರಾಜ್ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.