ADVERTISEMENT

ನ್ಯಾಯಬದ್ಧ ಹಕ್ಕಿಗಾಗಿ ಮೂಲ ಉಪಜಾತಿ ಬರೆಸಿ: ಸಿದ್ಧರಾಜ ಸ್ವಾಮೀಜಿ

ಮಾದಾರ ಮಹಾಸಭಾದಿಂದ ಜನ ಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:55 IST
Last Updated 28 ಏಪ್ರಿಲ್ 2025, 14:55 IST
ದೊಡ್ಡಬಳ್ಳಾಪುರದಲ್ಲಿ ಡಾ.ಜಗಜೀವನ್‌ ರಾಂ ಭವನದಲ್ಲಿ ಸೋಮವಾರ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಬೂತ್‌ ಮಟ್ಟದ ಜನ ಜಾಗೃತಿ ಸಭೆಯಲ್ಲಿ ಪಾಲನಹಳ್ಳಿ ಮಠದ ಸಿದ್ದರಾಜಸ್ವಾಮೀಜಿ ಹಾಗೂ ಮುಖಂಡರು ಭಾಗವಹಿಸಿದ್ದರು
ದೊಡ್ಡಬಳ್ಳಾಪುರದಲ್ಲಿ ಡಾ.ಜಗಜೀವನ್‌ ರಾಂ ಭವನದಲ್ಲಿ ಸೋಮವಾರ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಬೂತ್‌ ಮಟ್ಟದ ಜನ ಜಾಗೃತಿ ಸಭೆಯಲ್ಲಿ ಪಾಲನಹಳ್ಳಿ ಮಠದ ಸಿದ್ದರಾಜಸ್ವಾಮೀಜಿ ಹಾಗೂ ಮುಖಂಡರು ಭಾಗವಹಿಸಿದ್ದರು   

ದೊಡ್ಡಬಳ್ಳಾಪುರ: ಮಾದಿಗ ಸಮುದಾಯ ಈ ಹಿಂದಿನ ಸಮೀಕ್ಷೆಗಳ ಸಂದರ್ಭದಲ್ಲಿ ಮಾಡಿರುವ ತಪ್ಪುಗಳನ್ನು ಈಗಲೂ ಮಾಡದೇ ನಿರ್ದಿಷ್ಟವಾಗಿ ತಮ್ಮ ಮೂಲ ಉಪಜಾತಿಯನ್ನು ನಿಖರವಾಗಿ ಬರೆಸಬೇಕು. ಇದರಿಂದ ಸಮುದಾಯಕ್ಕೆ ನ್ಯಾಯಬದ್ಧವಾಗಿ ದೊರೆಯಬೇಕಿರುವ ಸರ್ಕಾರದ ಸವಲತ್ತುಗಳು ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಹಕಾರಿಯಾಗಲಿದೆ  ಎಂದು ಪಾಲನಹಳ್ಳಿ ಮಠದ ಸಿದ್ಧರಾಜ ಸ್ವಾಮೀಜಿ ಹೇಳಿದರು.

ಅವರು ನಗರದ ಡಾ.ಜಗಜೀವನ್‌ ರಾಂ ಭವನದಲ್ಲಿ ಸೋಮವಾರ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಬೂತ್‌ ಮಟ್ಟದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮಾದಿಗ ಸಮುದಾಯ ಸಾಕಷ್ಟು ಅವಕಾಶ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಹಲವು ವರ್ಷಗಳ ಅವಿರತ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳಾದ ಎಚ್‌.ಎಸ್‌.ನಾಗಮೋಹನದಾಸ್‌ ಅವರ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಒಳಮೀಸಲಾತಿ ಕಲ್ಪಿಸಲು ಮುಂದಾಗಿದೆ. ಮೇ 5 ರಿಂದ 17ರವರೆಗೆ ನಡೆಯಲಿರುವ ಮನೆ ಮನೆ ಜಾತಿಗಣ ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿಯವರು ಮಾದಿಗರು ಎಂದು ಬರೆಸುವ ಮೂಲಕ ನಮ್ಮ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆಯಲು ಜಾಗೃತರಾಗಬೇಕು ಎಂದು ಹೇಳಿದರು.

ADVERTISEMENT

ಮಾದಿಗ ಎಂದು ಬರೆಸಿದರಷ್ಟೇ ಒಳ ಮೀಸಲು: ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ಮುಂಖಡ ದೊಡ್ಡತುಮಕೂರು ಸಿ.ರಾಮಕೃಷ್ಣಪ್ಪ, ಮಾದಿಗ ಸಮುದಾಯ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಎಕೆ, ಎಡಿ, ಆದಿಡ್ರಾವಿಡ ಮುಂತಾದ ಹೆಸರು ಬರೆಸಲಾಗಿದೆ. ಪರಿಶಿಷ್ಠರಲ್ಲಿನ 101 ಜಾತಿಗಳು ಈಗ ನಡೆಸಲಾಗುತ್ತಿರುವ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ನಿರ್ಧಿಷ್ಟವಾಗಿ ‘ಮಾದಿಗ’ಎಂದೇ ಬರೆಸಬೇಕು. ಆಗ ಮಾತ್ರ ನಮ್ಮ ಹೋರಾಟಕ್ಕೆ ಜಯ ದೊರೆಯಲಿದೆ. ಒಳಮೀಸಲಾತಿ ಪಡೆಯಲು ಸಹಕಾರಿಯಾಗಲಿದೆ. ಮಾದಿಗ ಸಮುದಾಯದ ಪ್ರತಿಯೊಬ್ಬರು ತಮ್ಮ ಗ್ರಾಮಗಳು ಸೇರಿದಂತೆ ಸುತ್ತಮುತ್ತಲು ಪ್ರಚಾರಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮಾದಿಗ ಸಮುದಾಯದ ಮುಖಂಡರಾದ ಎಂ ಹನುಮಯ್ಯ, ಬಚಳ್ಳಿನಾಗರಾಜು, ಮುನಿಸುಬ್ಬಯ್ಯ, ಪುರುಷೋತ್ತಮ್, ಶಿವಣ್ಣ, ಟಿ.ಡಿ.ಮುನಿಯಪ್ಪ, ವಿ.ವೆಂಕಟೇಶ್, ರಾಜಘಟ್ಟ ಕಾಂತರಾಜು, ವೆಂಕಟರಮಣಪ್ಪ, ತಳವಾರನಾಗರಾಜು. ಆರ್.ವಿ.ಮಹೇಶ್, ನೆರಳಘಟ್ಟ ರಾಮು, ಹರ್ಷ ಹಾದ್ರಿಪುರ, ಮುತ್ತುರಾಜು ಸೂಲಕುಂಟೆ, ಕುಂಬಾರಪೇಟೆ ನಾರಾಯಣಪ್ಪ, ಟಿ.ಹನುಮಂತಯ್ಯ, ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುನಿರಾಜು, ಕೆ.ವಿ.ಮುನಿಯಪ್ಪ, ಎನ್‌.ಎಂ.ನರಸಿಂಹಮೂರ್ತಿ, ದಾಳಪ್ಪ, ಮುನಿಯಪ್ಪ, ಮುನಿರಾಜು, ದೊಡ್ಡಯ್ಯ ಇದ್ದರು.

ಮೂರು ಹಂತಗಳಲ್ಲಿ ಸಮೀಕ್ಷೆ

ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ಮುಂಖಡ ದೊಡ್ಡತುಮಕೂರು ಸಿ.ರಾಮಕೃಷ್ಣಪ್ಪ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಸಮೀಕ್ಷೆಯಿಂದ ಯಾರೊಬ್ಬರು ವಂಚಿತರಾಗಬಾರದು ಎಂದು ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಮೇ 5 ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ ಮೇ 19 ರಿಂದ ಮತಗಟ್ಟೆ ಹಂತದಲ್ಲಿ ಮೂರು ದಿನಗಳ ಕಾಲ ಶಿಬಿರ ನಡೆಸಲಾಗುತ್ತಿದೆ. ಮೂರನೇ ಹಂತದಲ್ಲಿ ಸ್ವಯಂ ಘೋಷಿತವಾಗಿ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕವು ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.