ADVERTISEMENT

ನಾಳೆ ಏಕಾದಶಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 5:59 IST
Last Updated 10 ಜುಲೈ 2022, 5:59 IST

ದೊಡ್ಡಬಳ್ಳಾಪುರ:ತಾಲ್ಲೂಕಿನ ಪಾಲನಜೋಗಿಹಳ್ಳಿಯ ಶ್ರೀಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಶ್ರೀಪಾಂಡುರಂಗ ಸ್ವಾಮಿ ಭಕ್ತ ಮಂಡಳಿಯಿಂದ ಆಷಾಢ ಶುದ್ಧ ಏಕಾದಶಿ ಅಂಗವಾಗಿ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮವು ಜುಲೈ 10ರಂದು ನಡೆಯಲಿದೆ.

ಇದರ ಅಂಗವಾಗಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸುರಭಿ ಭಜನಾ ಮಂಡಳಿಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಭರತ ನಾಟ್ಯ, ಭಕ್ತಿಗೀತೆ, ಭಜನೆ ಹಾಗೂ ಅಖಂಡ ಭಜನೆ, ಮಂಜುಶ್ರೀ ಮೆಲೋಡಿಸ್‌ನಿಂದ ಭಕ್ತಿಗೀತೆಗಳ ವಾದ್ಯಗೋಷ್ಠಿ ನಡೆಯಲಿದೆ.

ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಪೋಲನಹಳ್ಳಿ ನಾರಾಯಣಸ್ವಾಮಿ ಮತ್ತು ಸಂಗಡಿಗರಿಂದ ಪಂಡರಿ ಭಜನೆ ನಡೆಯಲಿದೆ. ಜುಲೈ 11ರಂದು ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.

ADVERTISEMENT

ವಿಶೇಷ ಪೂಜೆ: ನಗರದ ತೇರಿನ ಬೀದಿಯ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಜುಲೈ 11ರಂದು ಏಕಾದಶಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಇಂದು ಗೀತ ಗಾಯನ ಸ್ಪರ್ಧೆ
ದೊಡ್ಡಬಳ್ಳಾಪುರ:
ಶಿವರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್‌, ಕ್ರೀಡೆ, ಜಾನಪದ, ಸಾಂಸ್ಕೃತಿಕ ಅಭಿವೃದ್ಧಿ ವೇದಿಕೆಯಿಂದ ಜುಲೈ 10ರಂದು ನಟ ಶಿವರಾಜ್‌ಕುಮಾರ್‌ ಅವರ ಜನ್ಮದಿನದ ಅಂಗವಾಗಿ ಪಾರಿವಾಳ ಹಾರಾಟ ಮತ್ತು ಗೀತ ಗಾಯನ ಸ್ಪರ್ಧೆ ನಡೆಯಲಿದೆ.

ನಗರದ ತೇರಿನಬೀದಿಯಲ್ಲಿರುವ ಸರ್‌ ಎಂ. ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಸ್ಪರ್ಧೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.