ADVERTISEMENT

ರಸ್ತೆಗೆ ಅಡ್ಡಲಾಗಿ ವಿದ್ಯುತ್‌ ಪರಿವರ್ತಕ: ದೂರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:32 IST
Last Updated 27 ಜನವರಿ 2023, 22:32 IST
ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ವಿದ್ಯುತ್‌ ಪರಿವರ್ತಕ (ಇದರ ಹಿಂದೆ ಮಂಜುನಾಥ್‌ ಅವರ ನಿವೇಶನಕ್ಕೆ ಹೋಗುವ ದಾರಿ ಇದೆ)
ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ವಿದ್ಯುತ್‌ ಪರಿವರ್ತಕ (ಇದರ ಹಿಂದೆ ಮಂಜುನಾಥ್‌ ಅವರ ನಿವೇಶನಕ್ಕೆ ಹೋಗುವ ದಾರಿ ಇದೆ)   

ನೆಲಮಂಗಲ: ತಾಲ್ಲೂಕಿನ ಹನುಮಂತೇಗೌಡನಪಾಳ್ಯದ ನಿವಾಸಿ ಎನ್‌.ಮಂಜುನಾಥ್‌ ಅವರು ತಮ್ಮ ನಿವೇಶನಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಿದ್ದಾರೆ ಎಂದು ದೂರಿದ್ದಾರೆ.

'ನಮ್ಮ ನಿವೇಶನಕ್ಕೆ ಓಡಾಡಲು ಇದು ಒಂದೇ ಹತ್ತು ಅಡಿ ರಸ್ತೆ ಇದ್ದು, ಈ ರಸ್ತೆಗೆ ಅಡ್ಡಲಾಗಿ ಹಿಂದೆಯೆ ವಿದ್ಯುತ್‌ ಕಂಬ ಅಳವಡಿಸಲಾಗಿತ್ತು. ವಿದ್ಯುತ್‌ ಕಂಬದಿಂದ ನಮಗೆ ಓಡಾಡಲು ತೊಂದರೆ ಇರಲಿಲ್ಲ. ಆದರೆ ಪ್ರಸ್ತುತ ಕಾಂಕ್ರೀಟ್‌ ಇಟ್ಟಿಗೆಗಳ ಅಗಲವಾದ ಬೆಡ್‌ ನಿರ್ಮಿಸಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಲಾಗಿದೆ. ಇದರಿಂದ ಟ್ರ್ಯಾಕ್ಟರ್‌ ಹೋಗಲು ಸಹ ಇಕ್ಕಟಾಗಿದೆ. ಸುತ್ತಲೂ ಮೆಷ್‌ನಿರ್ಮಿಸುವ ಕಾರ್ಯ ಬಾಕಿ ಇದೆ. ಮೆಷ್‌ ನಿರ್ಮಿಸಿದರೆ ಇನ್ನೂ ಇಕ್ಕಟ್ಟಾಗುತ್ತದೆ. ಈ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.

ಈ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ನಾಗರಾಜ್‌ ಅವರನ್ನು ಕೇಳಿದಾಗ, ‘ವಿದ್ಯುತ್‌ ಪರಿವರ್ತಕ ಅಳವಡಿಸಿರುವುದು ಸರಿಯಾಗಿಯೆ ಇದೆ. ಸ್ಥಳೀಯರ ಅಭಿಪ್ರಾಯ ಪಡೆದೇ ಅಳವಡಿಸಿದ್ದೇವೆ. ಹಾಗೇನಾದರೂ ರಸ್ತೆಗೆ ಅಡ್ಡಲಾಗಿದೆ ಎಂದು ದೂರುದಾರರ ವಾದವಾದರೆ ಅವರು ಮುಖ್ಯಕಾರ್ಯನಿರ್ವಾಹಕರ ಬಳಿ ದೂರು ನೀಡಲು, ಹಾಗು ಸ್ಥಳಾಂತರಿಸಲು ಶುಲ್ಕ ಮತ್ತು ಸ್ಥಳ ತೋರಿಸಬೇಕಾಗುತ್ತದೆ’ ಎಂದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಲು ಶ್ರೀನಿವಾಸಪುರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಮಿತ್ರಾ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.