ದೊಡ್ಡಬಳ್ಳಾಪುರ: ಜಮೀನು ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ₹1.5 ಲಕ್ಷ ಲಂಚ ಪಡೆಯುವ ವೇಳೆ ಸೋಮವಾರ ಸಂಜೆ ಲೋಕಾಯುಕ್ತ ಪೊಲೀಸರಿಗೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಡಿ.ಎ.ದಿವಾಕರ್ ಸಿಕ್ಕಿಬಿದ್ದಾರೆ.
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಆರ್.ದಿವಾಕರ್ ಅವರು ನೆಲಮಂಗಲ ತಾಲ್ಲೂಕಿನ ಗಿರಿಯನಪಾಳ್ಯದ ಸರ್ವೇ ನಂಬರ್ 1/1ಎ1 ರೀ ಪೋಡಿ ಸರ್ವೇ ನಂಬರ್ 1/4 ಮತ್ತು 1/7 ರಲ್ಲಿನ 8.20 ಎಕರೆ/ಗುಂಟೆ ಕೋರ್ಟ್ ನೋಂದಣಿಯಂತೆ ಖಾತೆ ಮಾಡಿಕೊಡಲು ವಕೀಲರಾದ ಎಲ್.ದೊರೆಸ್ವಾಮಿ ಅವರ ಬಳಿ ಸುಮಾರು ₹2ಲಕ್ಷ ಬೇಡಿಕೆ ಇಟ್ಟಿದ್ದರು.
1.5 ಲಕ್ಷ ಕೊಡುವಂತೆ ಮಾತುಕತೆ ಆಗಿತ್ತು. ಇದರ ಪ್ರಕಾರ ಸೋಮವಾರ ದೇವನಹಳ್ಳಿ ಸಮೀಪದ ಶ್ರೀನಿಧಿ ವೈಭವ್ ಹೋಟೆಲ್ ಬಳಿ ಕಾರಿನಲ್ಲಿ ದೂರುದಾರರಿಂದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ್ ನೇತೃತ್ವದ ತಂಡ ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.