ADVERTISEMENT

ಹರಿಹರ ಕಲ್ಲುಗಾಲಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 13:10 IST
Last Updated 17 ಏಪ್ರಿಲ್ 2019, 13:10 IST
ವಿಜಯಪುರದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಗರ್ತ ಯುವಕ ಸಂಘದ ಬಸವರಾಜು ಮಾತನಾಡಿದರು    
ವಿಜಯಪುರದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಗರ್ತ ಯುವಕ ಸಂಘದ ಬಸವರಾಜು ಮಾತನಾಡಿದರು       

ವಿಜಯಪುರ: ಇಲ್ಲಿನ ಹರಿಹರ ಸಂಗಮ ಕ್ಷೇತ್ರವೆಂದು ಖ್ಯಾತಿ ಪಡೆದುಕೊಂಡಿರುವ ನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಶ್ರೀಮತ್ಕಲ್ಯಾಣೋತ್ಸವ ಕಾರ್ಯಕ್ರಮ ಏ.18 ರಂದು ಆರಂಭವಾಗಿ ಏ. 21 ರವರೆಗೆ ನಡೆಯಲಿದೆ ಎಂದು ಬ್ರಹ್ಮರಥೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ದಿನೇಶ್ ಹೇಳಿದರು.

ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಏ.18 ರಂದು ಪ್ರಧಾನ ಹೋಮಗಳು, ಗಿರಿಜಾ ಕಲ್ಯಾಣೋತ್ಸವ, ತಿರುಕಲ್ಯಾಣೋತ್ಸವ ದಾಸೋಹ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

19 ರಂದು 6 ನೇ ವರ್ಷದ ಹರಿಹರ ಕಲ್ಲುಗಾಲಿ ಬ್ರಹ್ಮರಥೋತ್ಸವದ ಅಂಗವಾಗಿ ಅಭಿಷೇಕ, ರಥಾಂಗ ಹೋಮ, ಸಂಜೆ 4.35 ಕ್ಕೆ ಹರಿಹರ ಬ್ರಹ್ಮರಥೋತ್ಸವ ಮತ್ತು ಬಲಮುರಿ ಗಣಪತಿ, ಭದ್ರಕಾಳಿ ಸಮೇತ, ರುದ್ರದೇವರ ಬ್ರಹ್ಮರಥೋತ್ಸವ, ಧೂಳೋತ್ಸವ, ಅನ್ನಸಂತರ್ಪಣೆ ನಡೆಯಲಿದೆ ಎಂದರು.

ನಗರ್ತ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ ಮಾತನಾಡಿ, ನಗರ್ತ ಯುವಕ ಸಂಘದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ನಗರ್ತ ಜನಾಂಗದ ಎಲ್ಲ ಅಂಗ ಸಂಸ್ಥೆಗಳು ಸಹಕಾರ ನೀಡಬೇಕೆಂದು ಕೋರಿದರು.

ಸುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು. ಮುಖಂಡರಾದ ಮುರಳಿ, ಸಿ. ಭಾಸ್ಕರ್, ವಿ. ಬಸವರಾಜು, ಸುರೇಶ್‌ ಬಾಬು, ಬಸವರಾಜು, ಸುಮನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.