ಹೊಸಕೋಟೆ: ನಗರದ ಕೋರ್ಟ್ ವೃತ್ತದಲ್ಲಿ ನಟ ದರ್ಶನ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್‌ಗಳನ್ನು ನಗರಸಭೆ ಅಧಿಕಾರಿಗಳು ಭಾನುವಾರ ತೆರವುಗೊಳಿಸಿದೆ ಎಂದು ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಗೆ ಶುಲ್ಕ ಪಾವತಿಸಿ ಬ್ಯಾನರ್ ಅಳವಡಿಸಲು ದರ್ಶನ್ ಅನುಮತಿ ಪಡೆದಿದ್ದೇವು. ಆದರೂ ಬ್ಯಾನರ್ ಹರಿದು ಹಾಕಿ, ಫೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ದೂರಿದ್ದಾರೆ.
ನಟ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ನಗರದಲ್ಲಿ ಮೂರು ಕಡೆ ಶುಭಾಶಯ ಕೋರುವ ಬ್ಯಾನರ್ ಅಳವಡಿಸಿದ್ದೇವೆ. ಅದರಲ್ಲಿ ಒಂದು ಕಡೆ ಬ್ಯಾನರ್ ಕಿತ್ತು ಹಾಕಿದ್ದರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದರ್ಶನ್ ಅಭಿಮಾನಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮಣಿದ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದ ಬ್ಯಾನರ್ ಅನ್ನು ಮತ್ತೆ ಅಳವಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.