ADVERTISEMENT

‘ಸಂಘಕ್ಕೆ ಲಾಭ ಬಂದರೆ ಹಾಲು ಉತ್ಪಾದಕರಿಗೆ ಅನುಕೂಲ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 13:15 IST
Last Updated 20 ಜನವರಿ 2019, 13:15 IST
ಅರಳುಮಲ್ಲಿಗೆ ಎಂಪಿಸಿಎಸ್ ನೂತನ ಅಧ್ಯಕ್ಷ ಕೆ.ಜಯರಾಮ, ಉಪಾಧ್ಯಕ್ಷೆ ರತ್ನಮ್ಮ ಅವರನ್ನು ಅಭಿನಂದಿಸಿದರು
ಅರಳುಮಲ್ಲಿಗೆ ಎಂಪಿಸಿಎಸ್ ನೂತನ ಅಧ್ಯಕ್ಷ ಕೆ.ಜಯರಾಮ, ಉಪಾಧ್ಯಕ್ಷೆ ರತ್ನಮ್ಮ ಅವರನ್ನು ಅಭಿನಂದಿಸಿದರು   

ಅರಳುಮಲ್ಲಿಗೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಅರಳುಮಲ್ಲಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಜಯರಾಮ, ಉಪಾಧ್ಯಕ್ಷರಾಗಿ ರತ್ನಮ್ಮ ಮುನಿಶಾಮಯ್ಯ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಕೆ.ಜಯರಾಮ ಮಾತನಾಡಿ, ಅರಳುಮಲ್ಲಿಗೆಯಲ್ಲಿ ಬಹುತೇಕ ಜನ ಕೃಷಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಎಲ್ಲ ಕುಟುಂಬಗಳು ಸಹ ಉಪಕಸುಬಾಗಿ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಅರಳುಮಲ್ಲಿಗೆಯಲ್ಲಿ ಪ್ರತಿ ದಿನ 1,200 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ರೈತರು ಗುಣಮ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘಕ್ಕೆ ಉತ್ತಮ ಲಾಭ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಹಾಲು ಉತ್ಪಾದಕರ ಮೇಲಿದೆ. ಸಂಘಕ್ಕೆ ಲಾಭ ಬಂದರೆ ರೈತರಿಗೂ ಸಾಕಷ್ಟು ಅನುಕೂಲಗಳು ದೊರೆಯಲಿವೆ ಎಂದರು.

ಸಂಘದ ನಿರ್ದೇಶಕರಾದ ನಂಜೇಗೌಡ, ಎ.ವಿ.ಲೋಕೇಶ್,ಎಂ.ರಾಜಣ್ಣ, ನಾರಾಯಣಪ್ಪ, ಎ.ಆನಂದ, ರಾಮಚಂದ್ರ, ಲಕ್ಷ್ಮಣ, ಕೆ.ಕೃಷ್ಣಮೂರ್ತಿ, ವೆಂಕಟಶಾಮಪ್ಪ, ಪದ್ಮ, ವರಲಕ್ಷ್ಮೀ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.