ADVERTISEMENT

ದೇವನಹಳ್ಳಿ: ಸರ್ಕಾರಿ ಜಾಗದ ಅಕ್ರಮ ಆದೇಶ ಆರೋಪ, ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 1:35 IST
Last Updated 6 ನವೆಂಬರ್ 2020, 1:35 IST
ಪ್ರತಿಭಟನನಿರತ ಗ್ರಾಮಸ್ಥರು
ಪ್ರತಿಭಟನನಿರತ ಗ್ರಾಮಸ್ಥರು   

ದೇವನಹಳ್ಳಿ: ಸರ್ವೆ ನಂಬರ್‌ 5ರಲ್ಲಿ 2.10ಎಕರೆ ಸರ್ಕಾರಿ ಖರಾಬು ಮತ್ತು ಸರ್ಕಾರಿ ಶಾಲಾ ಮಕ್ಕಳ ಆಟದ ಮೈದಾನ ಯಥಾವತ್ತು ಕಾಯ್ದಿರಿಸುವಂತೆ ಒತ್ತಾಯಿಸಿ ಸೋಲೂರು ಗ್ರಾಮಸ್ಥರು ಗುರುವಾರ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ನವೀನ್ ಕುಮಾರ್, ಚಿಕ್ಕೇಗೌಡ, ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪವಿಭಾಗಾಧಿಕಾರಿ ಒಂದೆರಡು ದಿನ ವರ್ಗಾವಣೆಯಾಗುವ ಮೊದಲು ಸರ್ಕಾರದ ಸಾರ್ವಜನಿಕ ಸ್ವತ್ತು ಅಕ್ರಮ ಆದೇಶ ಮಾಡಿದ್ದಾರೆ. ಇದರ ಬಗ್ಗೆ ಮೂಲ ದಾಖಲೆಗಳನ್ನು ತಿದ್ದುಪಡಿ ಮಾಡಿರುವುದು ಮತ್ತು ಆದೇಶ ಮಾಡಿರುವ ನಕಲು ಪ್ರತಿಯೊಂದಿಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅಕ್ರಮ ಆದೇಶ ಮಾಡಿರುವ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಇದರ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಭ್ರಷ್ಟಾಷಾರ ನಿಗ್ರಹ ದಳಕ್ಕೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಅರ್ಜಿ ನಮೂನೆ 50 ಮತ್ತು 53 ಸಲ್ಲಿಸದಿದ್ದರೂ ಅಕ್ರಮ ಸಾಗುವಳಿ ಹಕ್ಕುಪತ್ರ ನೀಡಿರುವ ಔಚಿತ್ಯವನ್ನು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.