ADVERTISEMENT

ನಾಡಧ್ವಜಕ್ಕೆ ಅಪಮಾನ, ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:50 IST
Last Updated 3 ಜೂನ್ 2019, 13:50 IST
ಕರವೇ ಮುಖಂಡರು ವಿಜಯಪುರದ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕರವೇ ಮುಖಂಡರು ವಿಜಯಪುರದ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ವಿಜಯಪುರ: ಇಲ್ಲಿನ 20 ನೇ ವಾರ್ಡ್‌ನ ಇಂದಿರಾನಗರದಲ್ಲಿ ನಿರ್ಮಾಣ ಮಾಡಿದ್ದ ಕನ್ನಡ ದ್ವಜಸ್ತಂಭದಿಂದ ನಾಡಧ್ವಜವನ್ನು ಕಿಡಿಗೇಡಿಗಳು ಕಿತ್ತುಹಾಕಿ ಅಪಮಾನ ಮಾಡಿದ್ದು ಅವರನ್ನು ಬಂಧಿಸಬೇಕು ಎಂದು ಕರವೇ (ಪ್ರವೀಣ್‌ ಶೆಟ್ಟಿ) ಮುಖಂಡರು ಪೊಲೀಸರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮನವಿ ಪತ್ರ ಸಲ್ಲಿಸಿದ ಅವರು, ‘ನಾಡಧ್ವಜಕ್ಕೆ ಉದ್ದೇಶಪೂರ್ವಕವಾಗಿಯೇ ಈ ರೀತಿಯಾಗಿ ಅಪಮಾನವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಪಮಾನವೆಸಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಮನವಿಪತ್ರ ತೆಗೆದುಕೊಂಡ ಸಬ್‌ ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಮಾತನಾಡಿ, ‘ನಾಡಧ್ವಜಕ್ಕೆ ಅಪಮಾನವೆಸಗಿರುವವರು ಯಾರೇ ಆಗಿದ್ದರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ’ ಎಂದರು.

ADVERTISEMENT

ಕನ್ನಡಪರ ಸಂಘಟನೆಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದಂತೆ ಗಮನಹರಿಸಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಏಕತೆಯಿಂದ ಮುನ್ನಡೆಯಬೇಕು. ಇಲ್ಲೆ ಹುಟ್ಟಿ ಬೆಳೆದಿರುವ ನೀರು ಪರಸ್ಪರ ಸಾಮರಸ್ಯದಿಂದ ಹೋಗಬೇಕು ಎಂದು ಸಲಹೆ ನೀಡಿದರು.

ರವಿಕುಮಾರ್, ಪವನ್‌ಕುಮಾರ್, ಶಂಕರ್, ಚಂದ್ರಪ್ಪ, ಪ್ರಕಾಶ್, ಭರತ್, ಮುರಳಿ, ಶ್ರೀಕಾಂತ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.