ADVERTISEMENT

ಮೇ 7 ರಂದು ಘಾಟಿಯಲ್ಲಿ ಹಲಸು ಮೇಳ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:34 IST
Last Updated 4 ಮೇ 2025, 14:34 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಹಲಸು ಬೆಳೆಗಾರರು ಹಾಗೂ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ಹಲಸಿನ ಹಣ್ಣು ನೀಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಹಲಸು ಬೆಳೆಗಾರರು ಹಾಗೂ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ಹಲಸಿನ ಹಣ್ಣು ನೀಡಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಹಲಸು ಬೆಳೆಗಾರರು ಹಾಗೂ ವ್ಯಾಪಾರಿಗಳಿಗಳ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಮೇ 7 ರಂದು ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಲಸು ಮೇಳೆ ನಡೆಸಲು ತೋಟಗಾರಿಕೆ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಗುಣವಂತ ಅವರಿಗೆ ಸೂಚನೆ ನೀಡಿದ್ದಾರೆ.

ಮೇ 7 ರಂದು ಘಾಟಿ ಕ್ಷೇತ್ರದಲ್ಲಿ ಮಾಂಗಲ್ಯ ಭಾಗ್ಯ ಯೋಜನೆಯಲ್ಲಿ ಸಾಮೂಹಿಕ ವಿವಾಹಗಳು ನಡೆಯಲಿವೆ. ಸಾವಿರಾರು ಜನ ಭಾಗವಹಿಸುವುದರಿಂದ ಪ್ರಥಮವಾಗಿ ಇಲ್ಲಿ ಹಲಸು ಮೇಳ ನಡೆಸಲಾಗುವುದು. ನಂತರ ನಗರದ ಹಿಂದೂಪುರ-ಬೆಂಗಳೂರು ರಸ್ತೆ ಬದಿಯಲ್ಲೂ ಸೂಕ್ತ ಸ್ಥಳ ಗುರುತಿಸಿ ಹಲಸು ಮೇಳೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ತಿಳಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆ ರಸ್ತೆ ಬದಿಯಲ್ಲಿ ಈಗ ರೈತರು ಹಾಗೂ ವ್ಯಾಪಾರಸ್ಥರು ಮಾರಾಟ ಮಾಡುತ್ತಿರುವ ಹಲಸಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ನಗರಸಭೆ ಪೌರಾಯುಕ್ತರು ಹಾಗೂ ಎಪಿಎಂಸಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ADVERTISEMENT

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್, ಹಲಸು ಬೆಳೆಗಾರ ಜಿ.ರಾಜಶೇಖರ್‌ ಹಾಗೂ ತೂಬಗೆರೆ ಭಾಗದ ಹಲಸು ಬೆಳೆಗಾರರು ಇದ್ದರು.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.