ದೊಡ್ಡಬಳ್ಳಾಪುರ: ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟವು ಚಾರಣಿಗರಿಗೆ ಎರಡು ಸಂದರ್ಭಗಳಲ್ಲಿ ನೋಡಲು ಅತ್ಯಂತ ಆಕರ್ಷಕ ಹಾಗೂ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಮಳೆಗಾಲ ಪ್ರಾರಂಭವಾದ ಆಗಸ್ಟ್, ಸೆಪ್ಟೆಂಬರ್ ನಂತರ, ಮತ್ತೆ ಫೆಬ್ರುವರಿ ಅಂತ್ಯ, ಮಾರ್ಚ್‌ನಲ್ಲಿ ಇಡೀ ಬೆಟ್ಟವನ್ನು ಜಾಲಾರಿ ಹೂವುಗಳು ಆವರಿಸಿಕೊಂಡಾಗ.
ಹೌದು, ಈಗ ಚನ್ನರಾಯಸ್ವಾಮಿ(ಚನ್ನಗಿರಿ) ಬೆಟ್ಟದಲ್ಲಿನ ಜಾಲಾರಿ ಮರಗಳಲ್ಲಿ ಹೂವುಗಳು ಮೂಡಿದ್ದು ಜೇನು, ದುಂಬಿ, ಪುಟ್ಟ ಪಕ್ಷಿಗಳನ್ನು ಸೆಳೆಯುತ್ತಿವೆ.
ಮರದ ಬಳಿ ಹೋಗಿ ನಿಂತರೆ ಒಂದೊಂದು ರೀತಿಯ ಪಕ್ಷಿ, ಜೇನು ನೊಣಗಳ ನಾದ ಮಂತ್ರ ಮುಗ್ದರನ್ನಾಗಿಸುತ್ತಿದೆ. ಇದರೊಟ್ಟಿಗೆ ಸೂರ್ಯೋದಯದ ಕಿರಣಗಳು ಜಾಲಾರಿ ಮರಗಳ ಹೂವುಗಳ ನಡುವೆ ತೂರಿ ಬರುವಾಗ ಹಾಲಿನಂತೆ ಫಳ ಫಳ ಹೊಳೆಯುತ್ತಿವೆ.
ತಾಲ್ಲೂಕಿನ ಪಂಚಗಿರಿ ಶ್ರೇಣಿಗಳ ಸಾಲಿನಲ್ಲಿ ಅತ್ಯಂತ ವಿಶಿಷ್ಟ ಪ್ರಕೃತಿ ಸೌಂದರ್ಯ ಹೊಂದಿರುವ ಚನ್ನಗರಿಯಲ್ಲಿ ಮಳೆಗಾಲಯದಲ್ಲಿ ಜೋಗ ಜಲಪಾತದಂತೆ ಬೃಹತ್ ಜಲಾಪಾತ ಧುಮ್ಮಿಕ್ಕಿ ಹರಿಯುತ್ತದೆ. ಅಪರೂಪದ ಔಷಧಿ ಸಸ್ಯ, ಕೀಟ ಭಕ್ಷಕ ಸಸ್ಯಗಳು ಈ ಬೆಟ್ಟದಲ್ಲಿ ಕಾಣ ಸಿಗುತ್ತವೆ.
‘ಜಾಲಾರಿ ಹೂವುಗಳು ಅರಳಿ ನಿಂತಿರುವ ಸೊಬಗು ಕಣ್ತುಂಬಿಕೊಂಡು ಹೂವಿನಿಂದ ಬರುವ ಸುವಾಸನೆ ಆಸ್ವಾದಿಸುವುದು, ಹೂವಿನೊಂದಿಗೆ ತೂರಿ ಬರುವ ಸೂರ್ಯೋದಯದ ಕಿರಣಗಳನ್ನು ನೋಡುವುದು ಅವಿಸ್ಮರಣೀಯ ಕ್ಷಣ’ ಎನ್ನುತ್ತಾರೆ ಚಾರಣಿಗ ಗಿರೀಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.