ADVERTISEMENT

ಕತ್ತಿ ಮಾರಮ್ಮ ದೇವಿ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:39 IST
Last Updated 12 ನವೆಂಬರ್ 2019, 16:39 IST
ಕತ್ತಿಮಾರಮ್ಮದೇವಿಗೆ ನಡೆದ ವಾರ್ಷಿಕ ಹೋಮ
ಕತ್ತಿಮಾರಮ್ಮದೇವಿಗೆ ನಡೆದ ವಾರ್ಷಿಕ ಹೋಮ   

ದೇವನಹಳ್ಳಿ: ಇಲ್ಲಿನ ಕೋಡಗುರ್ಕಿ ಐತಿಹಾಸಿಕ ಕತ್ತಿಮಾರಮ್ಮ ದೇವಿಗೆ ನಡೆದ ವಾರ್ಷಿಕೋತ್ಸವದಲ್ಲಿ ಅಪಾರ ಭಕ್ತರದಂಡು ದೇವಿ ದರ್ಶನ ಪಡೆದು ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡಿತು. ಬೆಳಿಗ್ಗೆ 7ಕ್ಕೆ ಮೂಲದೇವಾತಾ ಪ್ರಾರ್ಥನೆ, ಅನುಜ್ಞ ಮಹಾಗಣಪತಿ ಪೂಜೆ ನಡೆಯಿತು.

ಪುಣ್ಯಹ, ಸ್ಥಳಶುದ್ಧ, ಕಳಸ ಸ್ಥಾಪನೆ ವೇದಾರ್ಚನೆ, ಮೂಲದೇವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ನಡೆಯಿತು. ಚಂಡಿಕಾ ಪಾರಾಯಣ, ಅಗ್ನಿಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಮಹಾಚಂಡಿಕಾ ಹೋಮದಲ್ಲಿ ಭಕ್ತರು ಭಾಗಿಯಾದರು. ರೇಷ್ಮೆ ವಸ್ತ್ರ, ತುಪ್ಪ, ಕೊಬ್ಬರಿ ಬಟ್ಟಲು, ಪಂಚಫಲ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಬಾದಾಮಿ, ಭತ್ತ ಪೂರ್ಣಾಹುತಿಗೆ ಸಮರ್ಪಿಸಲಾಯಿತು.

ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ವೆಂಕಟೇಗೌಡ ಮಾತನಾಡಿ, ಸಪ್ತ ಮಾತೃಕೆಯರನ್ನು ಪ್ರತಿಷ್ಠಾಪಿಸಲಾಗಿದೆ. ವಿವಿಧ ವಿಭಾಗಗಳಿಂದ ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಅತಿ ಹೆಚ್ಚು ಇರಲಿದೆ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ನಾಢಪ್ರಭು ಕೆಂಪೇಗೌಡರ ವಂಶಸ್ಥರು ಈ ದೇವಾಲಯ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.