ADVERTISEMENT

ರಾಜಕಾಲುವೆ ಹೂಳು ತೆಗೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 13:22 IST
Last Updated 14 ಜೂನ್ 2019, 13:22 IST
ವಿಜಯಪುರ ದೊಡ್ಡಮೋರಿ ಸಮೀಪದಲ್ಲಿ ನಿಂತಿರುವ ಮಳೆ ನೀರು 
ವಿಜಯಪುರ ದೊಡ್ಡಮೋರಿ ಸಮೀಪದಲ್ಲಿ ನಿಂತಿರುವ ಮಳೆ ನೀರು    

ವಿಜಯಪುರ: ನಗರದಲ್ಲಿರುವ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸ್ಥಳೀಯರಾದ ಕಾರ್ಪೆಂಟರ್ ನಾಗರಾಜ್ ದೂರಿದ್ದಾರೆ.

ನೀರು ಹರಿದು ಹೋಗಬೇಕಾದ ರಾಜಕಾಲುವೆ ಮುಚ್ಚಿ ಹೋಗಿ ಗಿಡಗಂಟಿ ಬೆಳೆದಿದೆ. ಗಾಂಧಿಚೌಕ ಸೇರಿದಂತೆ ಸುತ್ತಮುತ್ತಲಿನಲ್ಲಿರುವ ಅಂಗಡಿ, ಹೊಟೇಲ್‌ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಅನ್ನು ಕಾಲುವೆಗೆ ಸುರಿದಿರುವುದರಿಂದ ಮುಚ್ಚಿ ಹೋಗಿದೆ. ಮಳೆ ಬಂದಾಗ ಚರಂಡಿಗಳಲ್ಲಿ ಹರಿಯಬೇಕಾಗಿರುವ ನೀರು ರಸ್ತೆಗಳ ಮೇಲೆ ಹರಿಯುತ್ತದೆ ಎಂದು ಅವರು ಆರೋಪಿಸಿದರು.

ಮುಖಂಡ ರವಿಕುಮಾರ್ ಮಾತನಾಡಿ, ನಾಗರಬಾವಿ ಕುಂಟೆಯನ್ನು ಸ್ಥಳೀಯ ಅಯೋಧ್ಯಾ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಮುಖಂಡರ ನೇತೃತ್ವದಲ್ಲಿ ಜೀಣೋದ್ಧಾರ ಮಾಡಲಾಗಿದೆ. ಕುಂಟೆ ಪಕ್ಕದಲ್ಲಿರುವ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಈ ನೀರನ್ನು ಕುಂಟೆಗೆ ಹರಿಸಬಹುದಾಗಿದ್ದು, ಪುರಸಭೆ ಅಧಿಕಾರಿಗಳು ಗಮನಹರಿಸಬೇಕೆಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.