ಆನೇಕಲ್ : ತಾಲ್ಲೂಕಿನಾದ್ಯಂತ ಬುಧವಾರ ಭಾರಿ ಮಳೆ ಸುರಿದು, ರಸ್ತೆಗಳಲ್ಲಿ ನೀರು ಹರಿಯಿತು. ಕೆಲವೆಡೆ ಮರಗಳು ಉರುಳಿದವು.
ಪಟ್ಟಣದ ಎಎಸ್‌ಬಿ ಕಾಲೇಜು ಆವರಣದ ಸ್ವರ್ಣ ಮಹೋತ್ಸವ ಭವನ ತಡೆಗೋಡೆ ಮೇಲೆ ಭಾರಿ ಗಾತ್ರದ ಮರವೊಂದು ಬಿದ್ದಿದ್ದು, ಕಾಂಪೌಂಡ್ ಕುಸಿದಿದೆ.
ಬುಧವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಆರಂಭವಾದ ಮಳೆ ಎರಡು ತಾಸಿಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ರಸ್ತೆಗಳಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಹರಸಾಹಸ ಪಟ್ಟರು.
ದ್ವಿಚಕ್ರ ವಾಹನಗಳು ರಸ್ತೆ ಬದಿಯ ಶೆಲ್ಟರ್ ಮತ್ತು ಸೇತುವೆ ಬಳಿ ನಿಂತು ಮಳೆಯಿಂದ ರಕ್ಷಿಸಿಕೊಳ್ಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿಗಳಲ್ಲಿ ಭಾರಿ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.