ಸೂಲಿಬೆಲೆ: ಗ್ರಾಮದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಹಾಗೂ ಗಾಳಿಯ ರಭಸಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಕಬ್ಬಿಣದ ಕಮಾನಿನ ಫಲಕ, ವಿವೇಕಾನಂದ ಶಾಲೆ ಆವರಣದಲ್ಲಿನ ಮತ್ತು ಗ್ರಾಮದಲ್ಲಿನ ಮರಗಳು ನೆಲಕ್ಕುರುಳಿದವು.
ಮನೆ ಚಾವಣಿ ಮತ್ತು ಅಂಗಡಿ ಮುಂಭಾಗದ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಸಿಡಿಲು, ಗಾಳಿಯ ಅಬ್ಬರಕ್ಕೆ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
ಮಂಗಳವಾರ ರಾತ್ರಿ 11 ಗಂಟೆಯ ನಂತರ ಬೆಳಿಗ್ಗೆ ವರೆಗೆ 42 ಮಿಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.