ADVERTISEMENT

ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ

ಮುನೇಶ್ವರ ದೇವಾಲಯಕ್ಕೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:12 IST
Last Updated 17 ಸೆಪ್ಟೆಂಬರ್ 2021, 4:12 IST
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯದ ನಿರ್ಮಾಣಕ್ಕೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್ ಧನಸಹಾಯ ಮಾಡಿದರು. ಮುಖಂಡರಾದ ಮದ್ದೂರಪ್ಪ, ರಾಜಣ್ಣ ಹಾಜರಿದ್ದರು
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯದ ನಿರ್ಮಾಣಕ್ಕೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್ ಧನಸಹಾಯ ಮಾಡಿದರು. ಮುಖಂಡರಾದ ಮದ್ದೂರಪ್ಪ, ರಾಜಣ್ಣ ಹಾಜರಿದ್ದರು   

ದೇವನಹಳ್ಳಿ: ‘ಒತ್ತಡದ ಜೀವನಶೈಲಿಯ ಪರಿಣಾಮ ಜರ್ಜರಿತರಾಗಿರುವ ಮನಸ್ಸುಗಳ ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯವಾಗಿದೆ’ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯದ ನಿರ್ಮಾಣಕ್ಕೆ ಗುರುವಾರ ಧನಸಹಾಯ ನೀಡಿ ಅವರು ಮಾತನಾಡಿದರು.

ಭಕ್ತಿಭಾವ, ನಂಬಿಕೆ ಮೌಢ್ಯವಲ್ಲ. ಜ್ಞಾನ, ಪೂಜೆ, ಭಜನೆ ಮಾತ್ರವಲ್ಲದೆ, ಕಾಯಕ ದಾಸೋಹ ಭಾವವು ದೇವಾಲಯದ ಮೂಲಕ ಲಭಿಸುತ್ತದೆ. ದೇವಾಲಯಗಳು ಸಂಸ್ಕಾರ ನೀಡುವ ತಾಣಗಳಾಗಿವೆ ಎಂದರು.

ADVERTISEMENT

ಗ್ರಾಮಗಳಲ್ಲಿ ಜನರು ಒಗ್ಗಟ್ಟು ಕಾಪಾಡಿಕೊಂಡು ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸುವಂತಾಗಬೇಕು. ಗ್ರಾಮೀಣ ಭಾಗದಲ್ಲಿ ಸಾಮರಸ್ಯ ಹೆಚ್ಚಲು ದೇವಾಲಯಗಳ ಪಾತ್ರ ಹೆಚ್ಚಿದೆ. ಪ್ರತಿ ಹಬ್ಬಗಳಲ್ಲಿ ಸಾಂಪ್ರಾದಾಯಿಕವಾಗಿ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಡೆಯಲಿವೆ. ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಬೇಕಾದರೆ ದೇವಾಲಯಗಳಿಗೆ ಜನರು ಮೊರೆ ಹೋಗುತ್ತಾರೆ ಎಂದರು.

ಮುಖಂಡರಾದ ಮದ್ದೂರಪ್ಪ, ರಾಜಣ್ಣ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.