ADVERTISEMENT

ಘಟಪ್ರಭಾ ಎಡದಂಡೆ ಕಾಲುವೆಗೆ ಧೂಪದಾಳ ಜಲಾಶಯ ನೀರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 8:15 IST
Last Updated 21 ಜೂನ್ 2011, 8:15 IST

ಘಟಪ್ರಭಾ (ಗೋಕಾಕ): ಇಲ್ಲಿಗೆ ಸಮೀಪದ ಧೂಪದಾಳ ಜಲಾಶ ಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ನೀರನ್ನು ಹರಿಬಿಡುವ ಮೂಲಕ ಗೋಕಾಕ ಮತ್ತು ಕಾಲುವೆ ಸುತ್ತ-ಮುತ್ತಲಿನ ತಾಲ್ಲೂಕುಗಳ ಜನತೆಯ ಮತ್ತು ದನಕರುಗಳ ಕುಡಿಯುವ ನೀರಿನ ಬವಣೆ ನೀಗಿಸಲು ಕ್ರಮ ಜರುಗಿಸಿದಂತಾಗಿದೆ.

ಸೋಮವಾರ ಸಂಜೆ ಜಲಾಶ ಯದಿಂದ ನೀರನ್ನು ಹರಿಬಿಟ್ಟ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಪಾಟೀಲ ಅವರು, ಜಲಾಶಯಕ್ಕೆ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದ್ದು ಅದನ್ನು ನದಿ ಹರಿಬಿಡ ಲಾಗುತ್ತಿದೆ. ಅದೇ ನೀರನ್ನು ಎಡದಂಡೆ ಕಾಲುವೆ ಮೂಲಕ ಹರಿಸಿದರೆ ಕಾಲುವೆ ವ್ಯಾಪ್ತಿಯ ಜನತೆ ಮತ್ತು ದನಕರುಗಳ ಕುಡಿಯುವ ನೀರಿನ ಬವಣೆ ನೀಗಿಸಲು ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಘಟಪ್ರಭಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಎನ್. ಬಡಿಗೇರ  ಸಾರ್ವಜ ನಿಕರು ನೀರನ್ನು ಪೋಲು ಮಾಡದೇ ಮಿತವಾಗಿ ಬಳಸುವಂತೆ ಮನವಿ ಮಾಡಿದರು.

ಕರ್ನಾಟಕ ನೀರಾವರಿ ನಿಗಮದ 1ನೇ ವಿಭಾಗದ ಸಹಾಯಕ ಅಭಿಯಂತರ ಡಿ.ಎಸ್.ಮದ್ಲಿ, ಮಹಾಮಂಡಳದ ಮಾಜಿ ಅಧ್ಯಕ್ಷ ಸಂಜು ಬಾನೆ, ಅರ್ಜುನ ನಾಯಿಕವಾಡಿ, ಜಿ.ಪಂ. ಮಾಜಿ ಸದಸ್ಯ ದುಂಡಪ್ಪ ಚೌಕಶಿ, ಪ್ರವೀಣ ಹುಕ್ಕೇರಿ ಮೊದಲಾದವರು ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ
ಧಾರವಾಡ: ಇಲ್ಲಿಯ ಲಯನ್ಸ್ ಕ್ಲಬ್ ಸಂಸ್ಥೆಗೆ ಈಚೆಗೆ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಗಿರೀಶ ನಾಡಿಗೇರ (ಅಧ್ಯಕ್ಷ), ಡಾ. ನವೀನ್ ಮಂಕಾನಿ (ಕಾರ್ಯದರ್ಶಿ), ಆರತಿ ಕಮಲಾಪುರ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆದಾರರನ್ನು ಸಂಘದ ಸದಸ್ಯರು, ಮಾಜಿ ಅಧ್ಯಕ್ಷರು, ಖಜಾಂಜಿ, ಉಪಾಧ್ಯಕ್ಷ, ಕಾರ್ಯದರ್ಶಿ ಇತರರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.