ADVERTISEMENT

ಟಿಜೆಎಸ್‌ಬಿ ಬ್ಯಾಂಕ್ ಶಾಖೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 9:40 IST
Last Updated 17 ಫೆಬ್ರುವರಿ 2012, 9:40 IST

ಬೆಳಗಾವಿ: ಟಿಜೆಎಸ್‌ಬಿ ಸಹಕಾರಿ ಬ್ಯಾಂಕಿನ 59ನೇ ಹಾಗೂ ಕರ್ನಾಟಕದಲ್ಲಿ ಮೊದಲ ಶಾಖೆಯು ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಈಚೆಗೆ ಆರಂಭಗೊಂಡಿತು.

ಬ್ಯಾಂಕಿನ ಶಾಖೆಯನ್ನು ಉದ್ಘಾಟಿಸಿದ ಬುಡಾ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ, “ಗುಜರಾತ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಸಹಕಾರಿ ಚಳವಳಿಯು ಉತ್ತಮವಾಗಿ ನಡೆಯುತ್ತಿದೆ. ಹೀಗಾಗಿ ಟಿಜೆಎಸ್‌ಬಿ ಬ್ಯಾಂಕಿಗೆ ಈ ಭಾಗದಲ್ಲಿ ಉತ್ತಮ ಭವಿಷ್ಯವಿದೆ” ಎಂದರು.

ಟಿಜೆಎಸ್‌ಬಿ ಬ್ಯಾಂಕಿನ ಉಪಾಧ್ಯಕ್ಷ ಬಾಲಚಂದ್ರ ದಾಟೆ, “ಮಾರ್ಚ್ ಅಂತ್ಯಕ್ಕೆ 7000 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ” ಎಂದರು.

ಟಿಜೆಎಸ್‌ಬಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ ಉಟೇಕರ ಸತ್ಕರಿಸಿದರು. ಬೆಳಗಾವಿ ಶಾಖೆಯ ವ್ಯವಸ್ಥಾಪಕ ಪ್ರಮೋದ ದೇಶಪಾಂಡೆ ಸ್ವಾಗತಿಸಿದರು. ಉದ್ಯಮಿ ಬಾಳಣ್ಣ ಕಗ್ಗಣಗಿ, ಬ್ಯಾಂಕಿನ ಅಧ್ಯಕ್ಷ ವಿದ್ಯಾಧರ ವೈಶಂಪಾಯನ್, ನಿರ್ದೇಶಕರಾದ ನಂದಗೋಪಾಲ ಮೆನನ್, ನಾಮದೇವ ಮಂಡಗೆ, ರಮೇಶ ಕಣಾಣಿ, ಮಧುಕರ ಖುತಾಡೆ, ಸುನಿಲ್ ಸಾಠೆ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.