ADVERTISEMENT

ಪರಿಶ್ರಮದಿಂದ ಎಲ್ಲವೂ ಸಾಧ್ಯ: ಅಂಗಡಿ

​ಪ್ರಜಾವಾಣಿ ವಾರ್ತೆ
Published 21 ಮೇ 2012, 6:25 IST
Last Updated 21 ಮೇ 2012, 6:25 IST

ಮೂಡಲಗಿ: `ಶ್ರದ್ಧೆ, ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದರೆ ಅಸಾಧ್ಯವೆನ್ನುವದು ಇಲ್ಲ~ ಎಂದು ಮಹಾಲಿಂಗಪುರದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಎಸ್.ಸಿ.ಪಿ.ಎಸ್. ಪದವಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ವಿ.ಎಸ್. ಅಂಗಡಿ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಎಡ್)ದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅವರು ಮಾತನಾಡಿದರು.ಸ್ಪರ್ಧೆಯನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಬಲಪಡಿಸಿಕೊಳ್ಳ ಬೇಕು. ದೈಹಿಕ ಶಿಕ್ಷಣಕ್ಕೆ ಇಂದು ಸಾಕಷ್ಟು ಅವಕಾಶಗಳಿವೆ ಎಂದರು.

ಗ್ರಾಮೀಣ ಭಾಗದಲ್ಲಿ ಬಿ.ಪಿ.ಎಡ್. ಕಾಲೇಜು ಪ್ರಾರಂಭಿಸಿ ಮೂಡಲಗಿ ಶಿಕ್ಷಣ ಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿ ಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ ಎಂ.ಎಚ್. ಸೋನವಾಲಕರ ಮಾತನಾಡಿ, ಕ್ರೆಡೆಗಳು ಮನುಷ್ಯನ ಮನೋಲ್ಲಾಸವನ್ನು ಇಮ್ಮಡಿಸಿ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ ಎಂದರು.

ಬಿ.ಪಿ.ಎಡ್. ಮುಗಿಸಿದ ಪ್ರಶಿಕ್ಷಣಾರ್ಥಿಗಳು ವೃತ್ತಿ ಗೌರವವನ್ನು ಕಾಯ್ದುಕೊಂಡು, ವಿದ್ಯೆ ನೀಡಿದ ಶಿಕ್ಷಣ ಸಂಸ್ಥೆ ಮತ್ತು ಪಾಲಕರನ್ನು ನೆನೆಯುವಂತೆ ಮಾಡಬೇಕು ಎಂದರು.ಪ್ರಶಿಕ್ಷಣಾರ್ಥಿಗಳಾದ ಅಶೋಕ ಬೆಳವಿ, ಬಸಪ್ಪ ಹಂಜಿ, ಹೇಮಾ ಪಾಟೀಲ, ಗಂಗಾಧರ ಭಿಂಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಬಿ.ಸಿ. ಪಾಟೀಲ,  ಜಾಬಶೆಟ್ಟಿ ಪ್ರಾಚಾರ್ಯ ಜಗದೀಶ ಸಸಾಲಟ್ಟಿ, ಉಪನ್ಯಾಸಕರಾದ ಮಲ್ಲಪ್ಪ ಕಂಕಣವಾಡಿ, ಮನ್ನಾಪೂರ ಉಪಸ್ಥಿತರಿದ್ದರು.ಉಪನ್ಯಾಸಕ ಬಿ.ಕೆ. ಬಡಗಣ್ಣವರ ಸ್ವಾಗತಿಸಿದರು, ಶ್ರೆನಿವಾಸ ಚಿಂತಾಕಲ್ ವಂದಿಸಿದರು, ವಿಠ್ಠಲ ಕಾಡಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.