ADVERTISEMENT

ಮಡಿವಾಳೇಶ್ವರ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 7:42 IST
Last Updated 25 ಏಪ್ರಿಲ್ 2013, 7:42 IST

ಹೊಸೂರ: ಗುರು ಮಡಿವಾಳ ಶಿವಯೋಗಿಗಳ 132ನೇ ಪುಣ್ಯತಿಥಿ ನಿಮಿತ್ತ ಗುರು ಮಡಿವಾಳೇಶ್ವರ ಮಹಾರಥೋತ್ಸವ ಗ್ರಾಮದಲ್ಲಿ ಇದೇ 25ರಂದು ಸಂಜೆ 4-30ಕ್ಕೆ ಜರುಗಲಿದೆ.

ಅಖಂಡ 7 ದಿನಗಳ ಕಾಲ ನಿರಂತರವಾಗಿ ನಡೆದುಕೊಂಡು ಬಂದ ಭಜನಾ ಸಪ್ತಾಹವು ಪಂಚಾಕ್ಷರ ಸ್ವಾಮೀಜಿ, ಮಡಿವಾಳೇಶ್ವರ ಮಠ ನಿಚ್ಚಣಕಿ ಇವರ ನೇತೃತ್ವದಲ್ಲಿ ಭಜನಾ ಸಪ್ತಾಹ ಮುಕ್ತಾಯಗೊಳ್ಳುವುದು. ಮುರಗೋಡ ಹಿರೇಮಠದ ಉಮೇಶ್ವರ ಶಿವಾಚಾರ್ಯರಿಂದ ಶಿವದೀಕ್ಷೆ ಹಾಗೂ ಸಾಮೂಹಿಕ ವಿವಾಹಗಳು ಜರುಗುವವು.

ಗರಗದ ಚನ್ನಬಸವ ಸ್ವಾಮೀಜಿ, ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಸಿದ್ರಾಮ ಸ್ವಾಮೀಜಿ, ಹೂಲಿಯ ಚನ್ನಬಸವ ಸ್ವಾಮೀಜಿ, ಯಕ್ಕುಂಡಿಯ ಪಂಚಾಕ್ಷರಿ ಸ್ವಾಮೀಜಿ,  ದೇವರಶೀಗಿ ಹಳ್ಳಿಯ ಸಿದ್ಧಲಿಂಗ ಸ್ವಾಮೀಜಿ,  ಮಲ್ಲೂರಿನ ನಿಶ್ಚಲಸ್ವರೂಪ ಸ್ವಾಮೀಜಿ, ನೇಗಿನಹಾಳದ ಬಸವಸಿದ್ಧಲಿಂಗ ಸ್ವಾಮೀಜಿ, ದೇಗಲಹಳ್ಳಿಯ  ವೀರೇಶ ಶ್ರೀಗಳು, ಬೈಲಹೊಂಗಲದ ಮಡಿವಾಳ ಸ್ವಾಮೀಜಿ, ಕುಮಾರದೇವರು ಗರಗ ಮತ್ತು ಗಂಗಾಧರ ಶ್ರೀಗಳ ನೇತೃತ್ವದಲ್ಲಿ ಮಹಾರಥೋತ್ಸವ ಜರುಗುವುದು.

ಶಿವಲಿಂಗ ಶಾಸ್ತ್ರಿ ಹಿರೇಮಠ, ಸಂಕನೂರ ಅವರಿಂದ ಶಿವಕೀರ್ತನೆ, ಮೃತ್ಯುಂಜಯಸ್ವಾಮಿ ಹಿರೇಮಠ ಇವರಿಂದ ಪ್ರವಚನ, ಮಹಾಬಳೇಶ್ವರ ಸಾಬನ್ನವರ ತಬಲಾ ಸಾಥ್ ನೀಡುವರು. ದಾನಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಜಾತ್ರಾ ಕಮಿಟಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.