ADVERTISEMENT

ವಿದ್ಯುತ್ ಕೊರತೆ ಖಂಡಿಸಿ ಹೆಸ್ಕಾಂಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:25 IST
Last Updated 2 ಅಕ್ಟೋಬರ್ 2012, 5:25 IST

ರಾಯಬಾಗ: ಪಟ್ಟಣದಲ್ಲಿ ವಿದ್ಯುತ್ ಕೊರತೆ ನೀಗಿಸಲು  ವೈಫಲ್ಯ ರಾಜ್ಯ ಸರ್ಕಾರದ ಅಸಮರ್ಪಕ ನೀತಿ ಖಂಡಿಸಿ  ಕಾಂಗ್ರೆಸ್ ಕಾರ್ಯಕರ್ತರು  ರಾಯಬಾಗ ಹೆಸ್ಕಾಂ  ಹೆಸ್ಕಾಂ ಕಚೇರಿಗೆ ಸೋಮವಾರ ಬೀಗ ಜಡೆದು ಪ್ರತಿಭಟಿಸಿದರು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ ಬೆಳಗಲಿ ಮಾತನಾಡಿ,  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ವಿದ್ಯುತ್ ಕೊರತೆಯ ಸಮಸ್ಯೆ ಹೆಚ್ಚಿದೆ ಎಂದು ದೂರಿದರು.

ಚಿಕ್ಕೋಡಿ ಲೋಕಸಭಾ ಯುವ ಕಾಂಗ್ರೆಸ್ ಅದ್ಯಕ್ಷ ಬಸವರಾಜ ಮರ್ದಿ ಮಾತನಾ ಡಿ, ಬಿಜೆಪಿ ಸರ್ಕಾರವು ಸುಳ್ಳು ಭರವಸೆಗಳಿಂದ ಮಾತಿನ ಮಂಟಪ ಕಟ್ಟುವುದರ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿದರು. ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖರ ಬಹುರೂಪಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

ಘಟಪ್ರಭಾ ನೀರು ಮಹಾಮಂಡಳಿಯ ನಿರ್ದೇಶಕ ಅರ್ಜುನ ತಮ್ಮಣ್ಣ ನಾಯ್ಕವಾ ಡಿ, ತಮ್ಮಣ್ಣ ನಾಯ್ಕವಾಡಿ, ಅಣ್ಣಾಸಾಬ ಹಂಚಿನಮನಿ,  ಎಸ್.ಸಿ.ಎಸ್.ಟಿ, ಘಟಕದ ಜಿಲ್ಲಾಧ್ಯಕ್ಷ  ಮಹಾವೀರ ಮೊಹಿತೆ,  ಎಸ್.ಸಿ ,ಎಸ್.ಟಿ.ರಾಜ್ಯ ಸಂಚಾಲಕ ಸುಕುಮಾರ ಕಿರಣಗಿ, ಮಹಾದೇವ ಮುದ್ದಾಪುರೆ, ಅಣ್ಣಾಸಾಬ ಸಮಾಜೆ, ಕೆ.ಬಿ.ತಡಕೆ, ದಾದಾಗೌಡ ಪಾಟೀಲ, ಚಂದ್ರಪ್ಪ ಪಡತರಿ. ಚಂದ್ರಕಾಂತ ದೇಸಾಯಿ, ಕೆ.ಎಂ.ನಿಂಗನೂರೆ, ಸಿದ್ದಪ್ಪ ಶಿವಾನಗೋಳ, ಲಕ್ಷ್ಮಣ ಪೂಜಾರಿ, ಮಹಾದೇವ ಪಾಟೀಲ, ವೈ.ಕೆ.ನಿಂಬಾಳಕರ, ಕಿರಣ ಕಾಂಬಳೆ ಮತ್ತು ತಾಲ್ಲೂಕಿನ ಕಾಂಗ್ರೆಸ್‌ಕಾರ್ಯಕರ್ತರು  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.