ADVERTISEMENT

ಹೆಚ್ಚುವರಿ ಶುಲ್ಕ ಆರೋಪ: ಧರಣಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 7:08 IST
Last Updated 20 ಸೆಪ್ಟೆಂಬರ್ 2013, 7:08 IST

ಬೆಳಗಾವಿ: ಇಲ್ಲಿನ ಮರಾಠಾ ಮಂಡಳ ಪಾಲಿಟೆಕ್ನಿಕ್‌ ಕಾಲೇಜಿನ ಆಡಳಿತ ಮಂಡಳಿಯ ಹೆಚ್ಚುವರಿ ಪ್ರವೇಶ ಶುಲ್ಕ ಪಡೆಯುತ್ತಿದೆ ಎಂದು ಆಪಾದಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಎನ್‌.ಜಯರಾಂ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಅನುದಾನಿತ ಪಾಲಿಟೆಕ್ನಿಕ್‌ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೋರ್ಸ್‌ಗಳ ಪ್ರತಿ ವರ್ಷದ ಪ್ರವೇಶ ಶುಲ್ಕ 5,700 ರೂಪಾಯಿ ಇರುತ್ತದೆ. ಆದರೆ, ಮರಾಠಾ ಮಂಡಳ ಪಾಲಿಟೆಕ್ನಿಕ್‌ನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಂದ 12,610 ರೂಪಾಯಿ ಪ್ರವೇಶ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ  ಪ್ರಯೋಜನವಾಗಿಲ್ಲ.

ಹೀಗಾಗಿ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಪ್ರವೇಶ ಶುಲ್ಕ ಪಡೆದಿರುವ ಮರಾಠಾ ಮಂಡಳ ಪಾಲಿಟೆಕ್ನಿಕ್‌ ಹೆಚ್ಚುವರಿ ಹಣವನ್ನು ಮರಳಿಸಲು ನಿರ್ದೇಶನ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು, ಶಂಕರ ರಾಠೋಡ, ಬಸವರಾಜ ಟೋಪಗಿ, ಶಂಕರ ರಾಯಣ್ಣವರ, ಮಹಾಂತೇಶ ಬೀಳಗಿ, ನಾಗಪ್ಪ ಹಾಲಿಮನಿ, ಸಂಜೀವ ಬಡಿಗೇರ, ಸಂತೋಷ ಬುಡಕಿ, ಸುನೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.