ಹಂದಿಗುಂದ: ‘ಕುಡಚಿ ಮತಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವುದೇ ನನ್ನ ಗುರಿ’ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಸಮೀಪದ ಪಾಲಭಾವಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಡಿ 33 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
‘ವಸತಿ ಯೋಜನೆಗಳಡಿ ಪ್ರತಿಯೊಬ್ಬರೂ ಮನೆ ನಿರ್ಮಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.
‘ಕುಡಚಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಇದಕ್ಕೆ ಕಿವಿಗೊಡುವುದಿಲ್ಲ. ಸತ್ಯ, ನಿಷ್ಠೆಯಿಂದ ಜನರಿಗಾಗಿ ಕೆಲಸ ಮಾಡುತ್ತೇನೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕುರಬೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಯ್ಯ ಹಿರೇಮಠ, ಪ್ರದೀಪ ಹಾಲ್ಗುಣಿ, ಬಸಪ್ಪ ತೇಗೂರ, ಗುರುನಾಥ ಜಂಜರವಾಡ, ಪರಪ್ಪ ಗೋಡಿ, ಅಸ್ಕರ್ ಮುಜಾವರ, ಪ್ರಭು ಕರೋಶಿ, ರಾಮಪ್ಪ ತೇಗೂರ, ಅಮರವ್ವ ನಾಯ್ಕರ, ಸೋಮನಾಥ ಪೂಜೇರಿ, ಗಿರೆಪ್ಪ ಬಳಗಾರ, ಪ್ರಕಾಶ ಪಾಟೀಲ, ಇಲಾಹಿ ಕಾಗವಾಡ, ಚನ್ನಪ್ಪ ಗಡಹಿಂಗ್ಲಜ ಇದ್ದರು. ಪಿಡಿಒ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು. ಹನುಮಂತ ತಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.