ADVERTISEMENT

‘ಯುವಜನರು ದ್ವೇಷಕ್ಕೆ ಬಲಿಯಾಗಬಾರದು’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 15:04 IST
Last Updated 15 ಸೆಪ್ಟೆಂಬರ್ 2019, 15:04 IST
ಅಥಣಿಯ ಶ್ರೀಕೃಷ್ಣರಾವ ಅಣ್ಣಾರಾವ ಲೋಕಾಪುರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಮತ್ತು ಇಂಗ್ಲಿಷ್‌ ವಿಭಾಗದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಚ್.ಎಂ. ಮುಜೀಬ್‌ ಅಹಮ್ಮದ್ ಅವರನ್ನು ಅರವಿಂದರಾವ ದೇಶಪಾಂಡೆ, ಬಿ.ಎಲ್. ಪಾಟೀಲ ಸತ್ಕರಿಸಿದರು

ಅಥಣಿ: ‘ಯುವಜನರು ಜಾತಿ, ಮತ ತಾರತಮ್ಯ, ದ್ವೇಷಕ್ಕೆ ಬಲಿಯಾಗಬಾರದು. ಆದರ್ಶ ಕಾರ್ಯದ ಗುರಿ ಹೊಂದಬೇಕು’ ಎಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಚ್.ಎಂ. ಮುಜೀಬ್‌ ಅಹಮ್ಮದ್ ಹೇಳಿದರು.

ಇಲ್ಲಿನ ಶ್ರೀಕೃಷ್ಣರಾವ ಅಣ್ಣಾರಾವ ಲೋಕಾಪುರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಮತ್ತು ಇಂಗ್ಲಿಷ್‌ ವಿಭಾಗದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ದಾರಿಯಲ್ಲಿ ಸಾಗಿ ಬಂದಿದೆ. ತಾಯ್ನಾಡಿನ ಸೇವೆ ಪ್ರಮುಖವಾಗಬೇಕು. ಎಲ್ಲರೂ ಒಂದೇ ಎನ್ನುವುದನ್ನು ಮರೆಯಬಾರದು’ ಎಂದರು.

ADVERTISEMENT

ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲ, ಜೆ.ಇ. ಸೊಸೈಟಿ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿದರು.

ಅಕ್ಷತಾ ಜಾಧವ ಹಾಗೂ ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಎ.ಇ. ಹಲಗೇರಿ ಸ್ವಾಗರಿಸಿದರು. ಉಪನ್ಯಾಸಕ ಜೆ.ಎಸ್. ಕೂಡವಕ್ಕಲಗಿ ಪ್ರಾಸ್ತಾವಿಕ ಮಾತನಾಡಿದರು. ಸೌಂದರ್ಯಾ ಅಲಿಬಾದಿ, ಸವಿತಾ ಹೊಸವಾಡ ನಿರೂಪಿಸಿದರು. ಉಪನ್ಯಾಸಕ ಪಿ.ಎಸ್. ಚನರೆಡ್ಡಿ ಮತ್ತು ಆರ್.ಎಂ. ದೇವರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.