ADVERTISEMENT

ಎಂ.ಕೆ.ಹುಬ್ಬಳ್ಳಿ | ಸಾಲ; ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:32 IST
Last Updated 2 ಆಗಸ್ಟ್ 2025, 7:32 IST
೧ಎಂಕೆಎಚ್೧ ಮೃತ ರೈತ ಅದೃಶ್ಯಪ್ಪ ಶಿವಲಿಂಗಪ್ಪ ಬೆಂಡಿಗೇರಿ.
೧ಎಂಕೆಎಚ್೧ ಮೃತ ರೈತ ಅದೃಶ್ಯಪ್ಪ ಶಿವಲಿಂಗಪ್ಪ ಬೆಂಡಿಗೇರಿ.   

ಎಂ.ಕೆ.ಹುಬ್ಬಳ್ಳಿ: ಮಾಡಿದ ಸಾಲ ತೀರಿಸಲಾಗದೇ ಮಾನಸಿಕವಾಗಿ ನೊಂದು ಈಚೆಗೆ ಕ್ರಿಮೀನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇಲ್ಲಿನ ರೈತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಅದೃಶ್ಯಪ್ಪ ಶಿವಲಿಂಗಪ್ಪ ಬೆಂಡಿಗೇರಿ (40) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿ ಕಾರ್ಯಕ್ಕಾಗಿ ತನ್ನ ಹಾಗೂ ಸಹೋದರನ ಹೆಸರಿಯಲ್ಲಿ ಜಂಟಿಯಾಗಿ ಸ್ಥಳೀಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ₹1.6 ಲಕ್ಷ ಬೆಳೆಸಾಲ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡೆದಿದ್ದ ₹30ಸಾವಿರ ಬೆಳೆಸಾಲ ಪಡೆದಿದ್ದರು.

ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಮಾನಸಿಕವಾಗಿ ನೊಂದು ಜುಲೈ 20ರಂದು ಮನೆಯ ಕೋಣೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ಕೂಡಲೇ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಜುಲೈ 29ರಂದು ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.