ಬೆಳಗಾವಿ: ಕಳಸಾ–ಬಂಡೂರಿ ಯೋಜನೆ ವಿರೋಧಿಸಿ, ಜೂನ್ 3ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್‍ಯಾಲಿ ನಡೆಸಲು ಪರಿಸರವಾದಿಗಳು ತೀರ್ಮಾನಿಸಿದ್ದಾರೆ.
ಇಲ್ಲಿನ ಮರಾಠಾ ಮಂದಿರದಲ್ಲಿ ‘ನಮ್ಮ ಅರಣ್ಯ, ನಮ್ಮ ನದಿ ಮತ್ತು ನಮ್ಮ ನೀರು’ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡರು.
‘ಈ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಇದನ್ನು ಕೈಬಿಡುವಂತೆ ರ್‍ಯಾಲಿ ನಡೆಸಿ, ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.
ಮುಖಂಡರಾದ ಸುಜಿತ ಮುಳಗುಂದ, ದಿಲೀಪ ಕಾಮತ, ಕ್ಯಾಪ್ಟನ್ ನಿತಿನ್ ಧೊಂಡ, ನ್ಯಾಲಾ ಕೊಯಿಲೊ, ಗೀತಾ ಸಾಹು, ನೀತಾ ಪೋತದಾರ, ಸಿದಗೌಡ ಮೋದಗಿ, ಸುನೀತಾ ಪಾಟೀಲ, ಪ್ರಶಾಂತ ಕಾಮತ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.