ADVERTISEMENT

ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಜೂನ್‌ 29ರಂದು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:31 IST
Last Updated 27 ಜೂನ್ 2025, 16:31 IST
ಬೆಳಗಾವಿಯ ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ
ಬೆಳಗಾವಿಯ ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ   

ಬೆಳಗಾವಿ: ‘ಇಲ್ಲಿನ ಟಿಳಕವಾಡಿಯ ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಆಧುನಿಕ ತಂತ್ರಜ್ಞಾನ, ನುರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸಲು ಸಜ್ಜಾಗಿದೆ. ಜೂನ್‌ 29ರಂದು ಬೆಳಿಗ್ಗೆ 9.30ಕ್ಕೆ ಶಗುನ್ ಗಾರ್ಡನ್‌ನಲ್ಲಿ ಆಸ್ಪತ್ರೆಯ ಉದ್ಘಾಟನೆ ನೆರವೇರಲಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ನೀತಾ ದೇಶಪಾಂಡೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಸ್ಪತ್ರೆಯು ಕೇವಲ ಚಿಕಿತ್ಸಾ ಕೇಂದ್ರವಾಗಿರದೇ, ಸಮಗ್ರ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಕೇಂದ್ರವಾಗಿದೆ. ರೋಗಗಳನ್ನು ಪ್ರಥಮ ಹಂತದಲ್ಲೇ ಕಂಡು ಹಿಡಿಯಲು ನಾವು ಆದ್ಯತೆ ನೀಡಿದ್ದೇವೆ’ ಎಂದರು.

‘ಖ್ಯಾತ ಹಿಂದಿ ಚಿತ್ರನಟ ನಾನಾ ಪಾಟೇಕರ, ಸಂಭಾಜಿ ಭಿಡೇ ಗುರೂಜಿ ಉದ್ಘಾಟಿಸಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ, ಸಂಸದ ಜಗದೀಶ ಶೆಟ್ಟರ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅಸೀಫ್ (ರಾಜು) ಸೇಠ್‌ ಅತಿಥಿಗಳಾಗಿ ಆಗಮಿಸಲಿದ್ದಾರೆ’ ಎಂದರು.

ADVERTISEMENT

‘ಸೆಂಟ್ರಾಕೇರ್ ಮಧುಮೇಹ, ಬೊಜ್ಜು ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಸಂಸ್ಥೆ ಈ ಆಸ್ಪತ್ರೆಯ ಪ್ರಮುಖ ಕೇಂದ್ರ. ಇಲ್ಲಿ ಆಹಾರ ನಿಯಂತ್ರಣ, ವ್ಯಾಯಾಮ,  ಔಷಧ ಉಪಚಾರ ಮತ್ತು ಆಪ್ತ ಸಮಾಲೋಚನೆ ಸೇರಿದಂತೆ ಸಮಗ್ರ ಸೇವೆಯನ್ನು ಒದಗಿಸಲಾಗುತ್ತದೆ. ಈ ಭಾಗದ ಪ್ರಪ್ರಥಮ ಹೃದಯ ಪುನಶ್ಚೇತನ ಕೇಂದ್ರ ಇದಾಗಿದೆ’ ಎಂದರು.

ಆಸ್ಪತ್ರೆಯ ನಿರ್ದೇಶಕ ದೀಪಕ್ ಕರಂಜೀಕರ, ‘ಪ್ರತಿ ರೋಗಿಗೆ ಸಂತೋಷದ ಅನುಭವ ಒದಗಿಸುವುದು ನಮ್ಮ ಗುರಿ’ ಎಂದರು.

ಸಹ ನಿರ್ದೇಶಕ ರೋಹಿತ್ ದೇಶಪಾಂಡೆ, ‘ಆರ್ಥಿಕ ಭಾರವಿಲ್ಲದ ಆರೋಗ್ಯಸೇವೆ ಸಮಾಜದ ಎಲ್ಲ ವರ್ಗಗಳಿಗೂ ಲಭ್ಯವಾಗಲೆಂದು ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.