ADVERTISEMENT

ಚಿಕ್ಕೋಡಿ: ಅಲ್ಲಮಪ್ರಭು ಮಹಾರಾಜರು ಲಿಂಗೈಕ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:26 IST
Last Updated 22 ಜೂನ್ 2025, 16:26 IST
ಬಸವಪ್ರಭು ಮಹಾರಾಜರು
ಬಸವಪ್ರಭು ಮಹಾರಾಜರು   

ಚಿಕ್ಕೋಡಿ: ತಾಲ್ಲೂಕಿನ ಮಜಲಟ್ಟಿಯ ಕಲ್ಮೇಶ್ವರ ಅಲ್ಲಮಪ್ರಭು ಮಂದಿರದ ಪೀಠಾಧಿಕಾರಿ ಬಸವಪ್ರಭು ಮಹಾರಾಜರು(76) ಭಾನುವಾರ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.

ಮಜಲಟ್ಟಿ ಮತ್ತು ಚಿಂಚಣಿಯಲ್ಲಿ ಮಂದಿರಗಳನ್ನು ಹೊಂದಿದ್ದ ಶ್ರೀಗಳು, ಕಳೆದ 45 ವರ್ಷಗಳಿಂದ ಕಲ್ಮೇಶ್ವರ–ಅಲ್ಲಮಪ್ರಭು ಸಂಪ್ರದಾಯದಂತೆ ಕರ್ನಾಟಕ, ಮಹಾರಾಷ್ಟ್ರದಲ್ಲಿ ಪ್ರವಚನ ಹೇಳುತ್ತಿದ್ದರು. ಅಪಾರ ಭಕ್ತರನ್ನು ಹೊಂದಿದ್ದ ಅವರು, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. 

ADVERTISEMENT

ಚಿಂಚಣಿ ಹಾಗೂ ಮಜಲಟ್ಟಿಯಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆದರು. ಮಜಲಟ್ಟಿಯಲ್ಲಿ ಭಾನುವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿತು.

ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಸದಲಗಾದ ಶ್ರದ್ಧಾನಂದ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಸಿಗರೂರಿನ ಅಭಿನವ ಕಲ್ಮೇಶ್ವರ ಮಹಾರಾಜರು, ಆಡಿಯ ಸಿದ್ದೇಶ್ವರ ಸ್ವಾಮೀಜಿ, ಶಾಸಕ ದುರ್ಯೋಧನ ಐಹೊಳೆ, ಮುಖಂಡರಾದ ರುದ್ರಪ್ಪ ಸಂಗಪ್ಪಗೋಳ, ಮಹೇಶ ಭಾತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಗ್ರಾಮದಲ್ಲಿ ಬಸವಪ್ರಭು ಮಹಾರಾಜರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.