ಚಿಕ್ಕೋಡಿ: ಹೆಲ್ಮೆಟ್ ಹಾಕದೇ ಇದ್ದಿದ್ದನ್ನು ಪ್ರಶ್ನಿಸುವ ನೆಪದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಬೈಕ್ ಸವಾರ ಹೃಷಿಕೇಶ ಲಿಂಬಿಗಿಡದ ಅವರು, ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಅಂಕಲಿ ಠಾಣೆ ಪೊಲೀಸರ ಮೇಲೆ ಶುಕ್ರವಾರ ಆರೋಪಿಸಿದ್ದರು.
ಬೈಕ್‌ನಲ್ಲಿ ತಮ್ಮೊಂದಿಗೆ ಇದ್ದ ತಮ್ಮ ತಾಯಿ ಸುಶೀಲಾ ಲಿಂಬಿಗಿಡದ ಅವರ ಮೇಲೂ ಪೊಲೀಸರು ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದರು.
ಈ ಕುರಿತು ಸ್ಪಷ್ಟನೆ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ‘ಬೈಕ್ ಸವಾರ ಹೃಷಿಕೇಶ ಅವರನ್ನು ತಡೆದ ಅಂಕಲಿ ಪೊಲೀಸರು ಹೆಲ್ಮೆಟ್ ಇಲ್ಲದನ್ನು ಪ್ರಶ್ನಿಸಿದ್ದು, ₹ 500 ದಂಡ ಪಾವತಿಸಲು ಹೇಳಿದ್ದಾರೆ. ತಾನು ಕೇವಲ ₹ 200 ದಂಡ ಪಾವತಿಸುವುದಾಗಿ ಬೈಕ್ ಸವಾರ ಹೇಳಿದರು. ಹೀಗಾಗಿ ಪೊಲೀಸರು ನ್ಯಾಯಾಲಯದ ದಂಡ ಬರೆದಿದ್ದಾರೆ’ ಎಂದು ತಿಳಿಸಿದರು.
‘ಅವರು ಕೆಟ್ಟದ್ದಾಗಿ ವರ್ತಿಸಲು ಪ್ರಾರಂಭಿಸಿದಾಗ ಬಿಎನ್‍ಎಸ್‍ಎಸ್‌ನ ಭದ್ರತಾ ವಿಭಾಗದ ಅಡಿಯಲ್ಲಿ ಚಿಕ್ಕೋಡಿ ತಹಶೀಲ್ದಾರ್ ಅವರ ಮುಂದೆ ಹಾಜರುಪಡಿಸಲಾಗಿದೆ. ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿಲ್ಲ ಮತ್ತು ಅವರ ವಿರುದ್ಧ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.