ಬಂಧನ
ಬೆಳಗಾವಿ: ಇಲ್ಲಿನ ಕೋಟೆ ಬಳಿ ಶನಿವಾರ ರಾತ್ರಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾರ್ಕಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದ ಉಮೇಶ ಸುರೇಶ ಉರಬಿನಹಟ್ಟಿ ಬಂಧಿತ. ಆತನಿಂದ ₹20 ಸಾವಿರ ಮೌಲ್ಯದ 627 ಗ್ರಾಂ ಗಾಂಜಾ, ₹4,090 ನಗದು, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ತಾಲ್ಲೂಕಿನ ಪೀರನವಾಡಿಯ ಜನತಾ ಪ್ಲಾಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಶನಿವಾರ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೀರನವಾಡಿಯ ವರ್ಧನ ಕಾಂಬಳೆ, ಪಾರ್ಥ ಗೋವೇಕರ ಬಂಧಿತರು. ಅವರಿಂದ ₹6,800 ಮೌಲ್ಯದ 580 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.