ADVERTISEMENT

ನಿಪ್ಪಾಣಿ: ಸಿಮೆಂಟ್ ಪೈಪ್‌ನಲ್ಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 15:38 IST
Last Updated 28 ಏಪ್ರಿಲ್ 2025, 15:38 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ನಿಪ್ಪಾಣಿ: ತಾಲ್ಲೂಕಿನ ಗವಾಣಿ ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವ ಎಸ್.ಎಂ. ಔತಾಡೆ ಕಂಪನಿಯ ಬಿಮ್ ಹಾಗೂ ಕಾಲಮ್‌ಗಳನ್ನು ಇಡುವ ಸ್ಥಳದಲ್ಲಿರುವ ಒಂದು ಸಿಮೆಂಟ್ ಪೈಪ್‌ನಲ್ಲಿ ವ್ಯಕ್ತಿಯೊಬ್ಬನ ಶವ (ಅಂದಾಜು 35 ರಿಂದ 40 ವರ್ಷ ವಯಸ್ಸು) ಪತ್ತೆಯಾಗಿದೆ.

ಮೃತ ವ್ಯಕ್ತಿ 5 ಅಡಿ 4 ಇಂಚು ಎತ್ತರ, ಮೈಯಿಂದ ತೆಳ್ಳಗಿದ್ದು, ಸಾದಾ ಕಪ್ಪು ಮೈ ಬಣ್ಣ ಹೊಂದಿದ್ದು, ತಲೆ, ಮುಖ ಹಾಗೂ ಕುತ್ತಿಗೆಯ ಭಾಗಗಳು ಕೊಳೆತ ಸ್ಥಿತಿಯಲ್ಲಿವೆ. ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಮಾಹಿತಿ ಇದ್ದಲ್ಲಿ ನಿಪ್ಪಾಣಿ ಶಹರ ಪೊಲೀಸ್ ಠಾಣೆ, 08338- 220033, ಅಥವಾ ಬೆಳಗಾವಿ ಕಂಟ್ರೋಲ್ ರೂಮ್ : 0831-2405231ನ್ನು ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.