ADVERTISEMENT

ಆ.10ರೊಳಗೆ ಇ–ಕೆಎವೈಸಿ ಮಾಡಿಸಿ: ಎ.ಎಲ್. ರಾವಳ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 14:21 IST
Last Updated 6 ಆಗಸ್ಟ್ 2021, 14:21 IST
ತಲ್ಲೂರ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸಭೆಯಲ್ಲಿ ಸವದತ್ತಿ ತಾಲ್ಲೂಕಿನ ಆಹಾರ ನಿರೀಕ್ಷಕ ಎ.ಎಲ್. ರಾವಳ ಮಾತನಾಡಿದರು
ತಲ್ಲೂರ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸಭೆಯಲ್ಲಿ ಸವದತ್ತಿ ತಾಲ್ಲೂಕಿನ ಆಹಾರ ನಿರೀಕ್ಷಕ ಎ.ಎಲ್. ರಾವಳ ಮಾತನಾಡಿದರು   

ತಲ್ಲೂರ (ಬೆಳಗಾವಿ ಜಿಲ್ಲೆ): ‘ತಾಲ್ಲೂಕಿನಲ್ಲಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ (ಬಿಪಿಎಲ್) ಚೀಟಿಗಳಲ್ಲಿ ಹೆಸರಿರುವ ಪ್ರತಿ ಸದಸ್ಯರೂ ಆಯಾ ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ನೀಡಿ ಇ–ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು’ ಎಂದು ಸವದತ್ತಿ ತಾಲ್ಲೂಕಿನ ಆಹಾರ ನಿರೀಕ್ಷಕ ಎ.ಎಲ್. ರಾವಳ ಹೇಳಿದರು.

ತಲ್ಲೂರ ಹಾಗೂ ಜಾಲಿಕಟ್ಟಿ, ಸೋಮಾಪೂರ, ಜೀವಾಪೂರ, ಆಲದಕಟ್ಟಿ ಕೆ.ಎಂ., ಮಬನೂರ, ಮದ್ಲೂರ, ನುಗ್ಗಾನಟ್ಟಿ ಗ್ರಾಮಳ ಪಂಚಾಯ್ತಿ ಹಾಗೂ ನಾಯ್ಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅವರು ಜಾಗೃತಿ ಮೂಡಿಸಿದರು.

‘ತಾಲ್ಲೂಕಿನಲ್ಲಿ ಶೇ 62ರಷ್ಟು ಮಂದಿ ಮಾತ್ರ ಇ–ಕೆವೈಸಿ ಮಾಡಿಸಿದ್ದಾರೆ. ಉಳಿದವರು ಆ.10ರ ಒಳಗೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸೆಪ್ಟೆಂಬರ್‌ನಿಂದ ಆ ಸದಸ್ಯರ ಪಡಿತರ ಆಹಾರ ಧಾನ್ಯದ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ’ ಎಂದರು.

ADVERTISEMENT

ಪಿಡಿಒ ಬಿ.ಬಿ. ಅಮ್ಮಿನಬಾವಿ, ಗ್ರಾ.ಪಂ. ಸದಸ್ಯ ಶಿವಾನಂದ ಮಲಕನ್ನವರ, ಸಚಿನ ಹೋಳಿ, ಶಶಿಧರ ತಳವಾರ, ಪಕ್ಕೀರಪ್ಪ ಬೇಟಸೂರ, ಸರಸ್ವತಿ ಹಮ್ಮಿನಿ, ಗಂಗವ್ವ ನಾಯ್ಕರ, ಸುಬಾನಿ ಕುದರಿ, ರಮೇಶ ನರಿ, ನೀಲಕಂಠ ಶಿವಪೂಜಿ, ಶಿವಬಸಪ್ಪ ಸರದಾರ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.