ADVERTISEMENT

‘ಜೀವ ಸಂಕುಲನದ ಉಳಿವಿಗೆ ಪರಿಸರ ಬೇಕು’

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:38 IST
Last Updated 5 ಜೂನ್ 2025, 14:38 IST
ಮೂಡಲಗಿಯ ರುದ್ರಭೂಮಿಯಲ್ಲಿ ನಿಸರ್ಗ ಫೌಂಡೇಷನ್‌ ಹಾಗೂ ಯುವ ಜೀವನ ಸೇವಾ ಸಂಸ್ಥೆಯಿಂದ ಗುರುವಾರ ಆಚರಿಸಿದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿದರು
ಮೂಡಲಗಿಯ ರುದ್ರಭೂಮಿಯಲ್ಲಿ ನಿಸರ್ಗ ಫೌಂಡೇಷನ್‌ ಹಾಗೂ ಯುವ ಜೀವನ ಸೇವಾ ಸಂಸ್ಥೆಯಿಂದ ಗುರುವಾರ ಆಚರಿಸಿದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿದರು   

ಮೂಡಲಗಿ: ‘ಜೀವ ಸಂಕುಲನದ ಉಳಿವಿಗಾಗಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿವಹಿಸಬೇಕು’ ಎಂದು ತಹಶೀಲ್ದಾರ್‌ ಕಚೇರಿಯ ಶಿರಸ್ತೇದಾರ ಪರಶುರಾಮ ನಾಯಕ ಹೇಳಿದರು.

ಇಲ್ಲಿಯ ರುದ್ರಭೂಮಿಯಲ್ಲಿ ನಿಸರ್ಗ ಫೌಂಡೇಷನ್‌ ಹಾಗೂ ಯುವ ಜೀವನ ಸೇವಾ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಪರಿಸರ ಸಮೃದ್ಧಿಯಿಂದ ಆರೋಗ್ಯಕರ ಜೀವನ ಹಾಗೂ ಮನುಷ್ಯನ ಜೀವನೋತ್ಸಾಹ ವೃದ್ಧಿಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ ಮಾತನಾಡಿ, ಮನುಷ್ಯರ ದುರಾಸೆಗಳಿಂದ ಪರಿಸರದ ಭಾಗವಾಗಿರುವ ಗಾಳಿ, ನೀರು, ಮಣ್ಣು ಕಲುಷಿತಗೊಳ್ಳುತ್ತಿದೆ. ಆಧುನಿಕತೆ ಹಾಗೂ ಕಾಂಕ್ರೆಟ್‌ ಬೆಳೆಯುತ್ತಿದ್ದಂತೆ ಪರಿಸರಕ್ಕೆ ಅಪಾಯ ಉಂಟಾಗಿದೆ ಎಂದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಸಸಿಗೆ ನೀರೂಣಿಸುವ ಮೂಲಕ ಪರಿಸರ ದಿನಾಚರಣೆಗೆ ಸಾಲನೆ ನೀಡಿದರು. ಪಿಎಸ್‌ಐ ಬಿ.ಎಚ್. ಕುಂಬಾರ, ನಿಲಯಪಾಲಕ ಯಲ್ಲಪ್ಪ ಭಜಂತ್ರಿ, ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ, ಸಂಜು ಕಮತೆ, ಮಾರುತಿ ಹಡಪದ, ನಂಜುಂಡಿ ಸರ್ವಿ, ಮಮ್ಮದ ಮುಲ್ಲಾ, ಪ್ರಭು ಮಂಟೂರ, ಅಕ್ಷಯ ಅವಾಡೆ, ರಮೇಶ ಉಪ್ಪಾರ, ಸುಭಾಷ ಮನ್ನಿಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.