ಸವದತ್ತಿ: ಇಲ್ಲಿನ ಗುರ್ಲಹೊಸೂರಿನ ದುರ್ಗಾದೇವಿ, ಮರಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದೇವರ ಮೂರ್ತಿಗಳ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಎಪಿಎಂಸಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಗುರ್ಲಹೊಸೂರಿನ ದೇವಸ್ಥಾನದತ್ತ ಸಾಗಿತು. ಮಹಿಳೆಯರ ಕುಂಭಮೇಳ ಮಹಿಳೆಯರು, ಜಗ್ಗಲಿಗೆ ಮೇಳ ಜೊತೆಯಾದವು. ಯುವಕರು, ಹಿರಿಯರು ಮೆರವಣಿಗೆಯುದ್ದಕ್ಕೂ ಭಂಡಾರ ಎರಚಿ ಹೊನ್ನಾಟ ಸಂಪನ್ನಗೊಳಿಸಿದರು.
ಗುರ್ಲಹೊಸೂರಿನ ಚರಮೂರ್ತೇಶ್ವರ ಮಠದ ಶಿವಾನಂದ ಶ್ರೀ ಹಾಗೂ ನಾಡಿನ ಪ್ರಮುಖ ಮಠಾಧೀಶರ ಸಾನ್ನಿಧ್ಯದಲ್ಲಿ ಧಾನ್ಯ ಸ್ಥಂಬನ, ಕಾಂಚಾನ ಸ್ಥಂಬನ, ಜಲಸ್ಥಂಬನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.ಯಲ್ಲಪ್ಪ ಗೊರವನಕೊಳ್ಳ, ಮಹಾದೇವ ಬಡ್ಲಿ, ಶ್ರೀಧರ ಆಸಂಗಿಹಾಳ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.