ರಾಯಬಾಗ (ಬೆಳಗಾವಿ ಜಿಲ್ಲೆ): ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹಿಡಕಲ್ ಗ್ರಾಮ ಪಂಚಾಯಿತಿಯ 5ನೇ ವಾರ್ಡ್‌ನ ಸದಸ್ಯ ಯಲ್ಲಪ್ಪ ಮಾರುತಿ ಸಣ್ಣಕ್ಕಿನವರ ಎಂಬವರು ಜಾನುವಾರು ದಲ್ಲಾಳಿ ಆಗಿರುವ ಹಾರೂಗೇರಿ ಪಟ್ಟಣದ ನಿವಾಸಿ ಅಮೀನಸಾಬ್ ಶೇಖ್ ಎಂಬವರ ಕೈ–ಕಾಲುಗಳನ್ನು ಕಟ್ಟಿ ರಸ್ತೆಯಲ್ಲಿ ಕೆಡವಿ, ಚಪ್ಪಲಿಯಿಂದ ಹೊಡೆದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ರಸ್ತೆಯಲ್ಲಿ ಅಮೀನಸಾಬ್ ಅವರನ್ನು ಎಳೆದುತಂದ ಯಲ್ಲಪ್ಪ ಹಾಗೂ ಇತರ ಇಬ್ಬರು ಸಹಚರರು ಹಗ್ಗದಿಂದ ಕೈ– ಕಾಲು ಕಟ್ಟಿದ್ದಾರೆ. ನೆಲಕ್ಕೆ ಬೀಳಿಸಿ, ಅವರ ಮುಖಕ್ಕೆ ಹಲವಾರು ಬಾರಿ ಚಪ್ಪಲಿಯಿಂದ ಹೊಡೆದಿದ್ದಾರೆ. ಊರಿನ ಜನ ಹಾಗೂ ಆಟವಾಡುತ್ತಿದ್ದ ಮಕ್ಕಳು ಕೂಡ ಈ ದೃಶ್ಯ ನೋಡಿದ್ದಾರೆ. ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬರು ಇದರ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಹಾರೂಗೇರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂತ್ರಸ್ತ ವ್ಯಕ್ತಿ ದೂರು ದಾಖಲಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.